ಜಕಾತಿ ವಸೂಲಾತಿ : ಶುಲ್ಕ ಪಾವತಿಸಲು ವ್ಯಾಪಾರಸ್ಥರಿಗೆ ಸೂಚನೆ

: ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಂದ ಜಕಾತಿ ವಸೂಲಾತಿ ಮಾಡಬೇಕಾಗಿದ್ದು, ಶುಲ್ಕ ಪಾವತಿಸುವಂತೆ ನಗರಸಭೆ ಪೌರಾಯುಕ್ತರು ಬೀದಿ ಬದಿ ವ್ಯಾಪಾರಸ್ಥರಿಗೆ ಸೂಚನೆ ನೀಡಿದ್ದಾರೆ.
ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ಬದಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಸ್ಥರಿಂದ ಸರ್ಕಾರದ ಆದೇಶ ೧೯೬೪ ಕಲಂ ೧೩೮ (೫) ಮತ್ತು (೬) ರ ಪ್ರಕಾರ ಜಕಾತಿಯನ್ನು ವಸೂಲಾತಿ ಮಾಡಬೇಕಾಗಿದೆ. ಕೆಲಸ ನಿರ್ವಹಿಸಲು ಶಾಂತಕುಮಾರ ತಂದೆ ಸಿದ್ದಪ್ಪ ದೊಡ್ಡಮನಿ ಇವರಿಗೆ ಟೆಂಡರ್ ಮಂಜೂರಾತಿಯಾಗಿದ್ದು, ಅದರಂತೆ ಜಕಾತಿ ವಸೂಲಾತಿ ಮಾಡುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದರಿಂದ ಜಕಾತಿ ಶುಲ್ಕ ವಸೂಲಾತಿ ಮಾಡುವುದನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಚುನಾವಣಾ ನೀತಿ ಸಂಹಿತೆ ಮುಕ್ತಾಯಗೊಂಡಿರುವುದರಿಂದ ಬೀದಿ ಬದಿ ವ್ಯಾಪಾರಸ್ಥರು ಪ್ರತಿದಿನ ಜಕಾಲಿ ಶುಲ್ಕವನ್ನು ಪಾವತಿಸುವಂತೆ ಪ್ರಕಟಣೆ ತಿಳಿಸಿದೆ.