ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ: ಶಾಸಕ ಅಮರೇಗೌಡ ಬಯ್ಯಾಪುರ ಪರಿಶೀಲನೆ

 

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಡೆಯುತ್ತಿರೋ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಯನ್ನು ಶಾಸಕ ಅಮರೇಗೌಡ ಬಯ್ಯಾಪುರ ಪರಿಶೀಲನೆ ನಡೆಸಿದ್ರು.‌ ಕುಷ್ಟಗಿ ತಾಲೂಕಿನ ಹಿರೇಮನ್ನಾಪುರ,
ಹುಲಿಯಾಪುರ, ಹಂಚಿನಾಳ್ ಗ್ರಾಮಗಳಲ್ಲಿ ತಲಾ ಎರಡು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟದ ಕಾಮಗಾರಿ ನಡೆಸುವಂತೆ ಸಣ್ಣನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಇದೇ ವೇಳೆ ಮಾತನಾಡಿದ ಶಾಸಕ ಅಮರೇಗೌಡ ಬಯ್ಯಾಪುರ, ನಮ್ಮ‌ ವಿಧಾನಸಭಾ ಕ್ಷೇತ್ರದ ಬಹುತೇಕ ಪ್ರದೇಶವು ಮಳೆಯಾಶ್ರೀತ ಭೂಪ್ರದೇಶವಾಗಿದ್ದು, ಇದ್ರಿಂದ ಪ್ರತಿಯೊಂದು ಗ್ರಾಮಗಳಲ್ಲಿ ಜಾನುವಾರುಗಳಿಗೆ, ರೈತರ ಜಮೀನುಗಳಿಗೆ ನೀರಿಲ್ಲದೆ ಪರದಾಟ ನಡೆಸ್ತಾ ಇದ್ರು. ಇದ್ರಿಂದ ಈ ಬಗ್ಗೆ ಸರ್ಕಾರದ ಗಮನ ಸೆಳೆದು ನನ್ನ ವಿಧಾನಸಭಾ ಕ್ಷೇತ್ರದ ಬಹುತೇಕ ಗ್ರಾಮಗಳಲ್ಲಿ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಅನುಮೋದನೆ ‌ಪಡೆಯಲಾಗಿದೆ.. ಇದ್ರಿಂದ ಹಲವಾರು ಗ್ರಾಮಗಳು ಬರದಿಂದ ತಪ್ಪಿಸಿಕೊಳ್ಳಲಿವೆ ಎಂದ್ರು.‌ಇನ್ನೂ ಅಧಿಕಾರಿಗಳಿಗೂ ಸಹ ಗುಣಮಟ್ಟದ ಕಾಮಗಾರಿ ಮಾಡಬೇಕು ಒಂದು ಕಳಪೆ ಕಾಮಗಾರಿ ಕಂಡುಬಂದ್ರೆ ಅಂತಹ ಅಧಿಕಾರಿಗಳ ವಿರುದ್ದ ಕ್ರಮಕ್ಕೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದ್ರು. ಇದೇ ವೇಳೆ ಸಣ್ಣ ನೀರಾವರಿ
ಎಇಇ ರಘುನಾಥ್, ಜೆ.ಇ ರಾಜು ಕಟ್ಟಿಮನಿ ಉಪಸ್ಥಿತರಿದ್ದರು..

Please follow and like us:
error