ಚುನಾವಣೆಗೆ ಖೋಟಾನೋಟು ಮೋದಿ ಕಳುಹಿಸಿದ್ರಾ?- ತಂಗಡಗಿ

ಕೊಪ್ಪಳ : Koppal News

ನೋಟ ಬ್ಯಾನ್ ಮಾಡಿ ಕಪ್ಪು ಹಣ, ಖೋಟಾ ನೋಟಗೆ ಕಡಿವಾಣ ಹಾಕುತ್ತೇನೆ ಅಂತ ಮೋದಿ ಅವ್ರು ಹೇಳಿದ್ದರು. ಅದಕ್ಕಾಗಿ ೧೦೦೦ ಹಾಗು ೫೦೦ ರೂ ನೋಟ ಬ್ಯಾನ್ ಮಾಡಿದ್ರು ಹಾಗಾದರೆ ಖೋಟಾ ನೋಟು ಕೊಪ್ಪಳ ಜಿಲ್ಲೆ ಗಂಗಾವತಿಗೆ ಹೇಗೆ ಬಂತು ? ಎಂದು ಪ್ರಶ್ನೆ ಮಾಡಿದ್ದು ಡಿಸಿಸಿ ಅಧ್ಯಕ್ಷ ಶಿವರಾಜ್ ತಂಗಡಗಿ

೧೩ ಜನ ಖೋಟಾ ನೋಟು ಪ್ರಕರಣದಲ್ಲಿ ಬಂಧಿತರಾಗಿದ್ದಾರೆ ಬಂಧಿತರಲ್ಲಿ ಬಿಜೆಪಿ ಮುಖಂಡರು ಇದ್ದಾರೆ. ಖೋಟಾ ನೋಟಿನ ಪ್ರಕರಣದ ಬಗ್ಗೆ ದೂರು ನೀಡಿದ್ದು ಗಂಗಾವತಿ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ

ಚುನಾವಣೆಗೆ ಖೋಟಾನೋಟು ಮೋದಿ ಕಳುಹಿಸಿದ್ರಾ? ಅಥವಾ ಯಡಿಯೂರಪ್ಪ ಕಳುಹಿಸಿದ್ರಾ?

ಇದರಲ್ಲಿ ಬಿಜೆಪಿ ಖೋಟಾ ನೋಟು ಚಲಾವಣೆ ಮಾಡಿರುವ ಅನುಮಾನ ಕಾಡುತ್ತಿದೆ ಎಂದು ಡಿಸಿಸಿ ನೂತನ ಅದ್ಯಕ್ಷ ಮಾಹಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿುದ್ದರು.

ಶಾಸಕ ಕೆ ರಾಘವೇಂದ್ರ ಹಿಟ್ನಾಳ, ಅಮರೇಗೌಡ ಬಯ್ಯಪೂರ, ಮಾಜಿ ಜಿಲ್ಲಾಧ್ಯಕ್ಷ ಬಸವರಾಜ ಹಿಟ್ನಾಳ‌ ಸೇರಿದಂತೆ ಇತರರು ಭಾಗಿ

Related posts