ಚೀನಾ ಮೊಬೈಲ್ ಬಳಸದಿರಲು ಪ್ರತಿಜ್ಞೆ

ಕೊಪ್ಪಳ: ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಇನ್ನು ಮುಂದೆ ಚೀನಾ ಉತ್ಪನ್ನಗಳ ಖರೀದಿಯನ್ನು ನಿಲ್ಲಿಸುವಂತೆ ವಿಶೇಷವಾಗಿ ಚೀನಾದ ಮೊಬೈಲ್ಗಬಳನ್ನು ಬಳಸುವುದಿಲ್ಲ ಎಂದು ಗ್ರಾಮಸ್ಥರು ಪ್ರತಿಜ್ಞೆ ಮಾಡಿದರು.

ಚೀನಾದ ಕುತಂತ್ರಕ್ಕೆ ಬಲಿಯಾದ ಹೆಮ್ಮೆಯ ಭಾರತದ ವೀರಯೋಧರ ಗೌರವ ಸಮರ್ಪಣೆ ಕಾರ್ಯಕ್ರಮ ಬುಧವಾರ ನಡೆಯಿತು. ಚೀನಾದ ದಾಳಿಯಿಂದ ಹುತಾತ್ಮರಾದ ಭಾರತದ ಯೋಧರಿಗೆ ಜ್ಯೋತಿ ಬೆಳಗುವ ಮೂಲಕ ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸ್ವದೇಶಿ ಉತ್ಪನ್ನಗಳನ್ನು ಬಳಸುವುದು ಮತ್ತು ಚೀನಾ ಮೊಬೈಲ್ ಆ್ಯಪ್ ಗಳನ್ನ ಉಪಯೋಗಿಸದೆ, ಸ್ವದೇಶಿ ನಿರ್ಮಿತ ಆ್ಯಪ್ಗ ಳನ್ನು ಬಳಸುವ ಕುರಿತು ಯುವಮೋರ್ಛಾದ ಉಪಾಧ್ಯಕ್ಷ ಶಿವಪ್ರಸಾದ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಕಾರ್ಯಕ್ರಮದಲ್ಲಿ ವೀರೇಶ್ ಸಜ್ಜನ್ ಶರಣಪ್ಪ ಯುವಮೋರ್ಚಾದ ಉಪಾಧ್ಯಕ್ಷ ಶಿವಪ್ರಸಾದ ಹಾರೋಗೇರಿ. ಏಳುಕೋಟೇಶ ಕೊಮಲಾಪುರ ಮಲ್ಲಪ್ಪ ಸಿಂಪಿ ಯೋಗಾನಂದ ಬಡಿಗೇರ ಉಮೇಶ ಹಟ್ಟಿ ಹನುಮಂತ ಅವಿನಾಶ ಈರಜ್ಜ ಮೇಘರಾಜ ನಿಂಗಜ್ಜ ಹೂಗಾರ ಇನ್ನಿತರರು ಇದ್ದರು.

Please follow and like us:
error