You are here
Home > Koppal News > ಚಿಕ್ಕಬಗನಾಳ ಗ್ರಾಮದಲ್ಲಿ ಡೆಂಗ್ಯೂ ಆರೋಗ್ಯ ಇಲಾಖೆ ನಿರ್ಲಕ್ಷ : ಅಮರೇಶ ಕರಡಿ ಖಂಡನೆ

ಚಿಕ್ಕಬಗನಾಳ ಗ್ರಾಮದಲ್ಲಿ ಡೆಂಗ್ಯೂ ಆರೋಗ್ಯ ಇಲಾಖೆ ನಿರ್ಲಕ್ಷ : ಅಮರೇಶ ಕರಡಿ ಖಂಡನೆ

 

ಕೊಪಳ: ತಾಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ಕಳೆದ ೧೫ ದಿನಗಳಿಂದ ಡೆಂಗ್ಯೂ ತಾಂಡವವಾಡುತ್ತಿದ್ದು, ಯಾವೊಬ್ಬ ವೈದ್ಯಾಧಿಕಾರಿಯೂ ಇತ್ತ ಗಮನ ಹರಿಸದೇ ಇರುವುದು ನಾಚಿಗೇಡಿನ ಸಂಗತಿ. ಇದು ಆರೋಗ್ಯ ಇಲಾಖೆಯ ದಿವ್ಯ ನಿರ್ಲಕ್ಷವನ್ನು ಎತ್ತಿತೋರಿಸುತ್ತಿದೆ. ಕೂಡಲೇ ಗ್ರಾಮಕ್ಕೆ ವ್ಯದ್ಯಾಧಿಕಾರಿಗಳು ಭೇಟಿನೀಡಿ ಪರೀಶಿಲಿಸಿ ಗ್ರಾಮಸ್ತರಿಗೆ ಸೂಕ್ತ ಚಿಕಿತ್ಸೆ ನೀಡಲು ಮುಂದಾಗಲಿ ಎಂದು ಬಿಜೆಪಿ ಮುಂಖಡ ಅಮರೇಶ ಕರಡಿ ಒತ್ತಾಯಿಸಿದರು.
ಸೋಮವಾರ ಚಿಕ್ಕಬಗನಾಳ ಗ್ರಾಮಕ್ಕೆ ಭೇಟಿ ನೀಡಿ ಡೆಂಗ್ಯೂ ಕಾಯಿಲೆಯಿಂದ ಬಳುಲುತ್ತಿರುವ ಜನರ ಯೋಗಕ್ಷೇಮ ವಿಚಾರಿಸಿ ನಂತರ ಮಾತನಾಡಿದರು.
ಮಳೆಗಾಲ ಆರಂಭವಾಗಿದ್ದು, ಅಲ್ಲಲ್ಲಿ ನೀರು ನಿಲ್ಲುವುದರಿಂದ ಸಾಂಕ್ರಾಮಿಕ ಕಾಯಿಲೆಗಳು ಉಲ್ಬಣವಾಗುವುದು ಸಹಜ. ಆರೋಗ್ಯ ಇಲಾಖೆ ಕೇವಲ ಬಾಯಿ ಮಾತಿನಲ್ಲಿ ಗ್ರಾಮಗಳಿಗೆ ಬೇಟಿ ನೀಡಿ ಮುಂಜಾಗ್ರತ ಕ್ರಮಗಳು ಮತ್ತು ಚಿಕಿತ್ಸೆ ನೀಡುತ್ತಿದ್ದೇವೆಂದು ಹೇಳುತ್ತಿದ್ದಾರೆ. ಆದರೆ, ಚಿಕ್ಕಬಗನಾಳ ಗ್ರಾಮದಲ್ಲಿ ತಿಂಗಳು ಹಿಂದೆಯೇ ಡೆಂಗ್ಯೂ ಪ್ರಕರಗಳು ಪತ್ತೆಯಾಗಿದ್ದೂ ಗ್ರಾಮದಲ್ಲಿ ವೈಧ್ಯರ ಕೊರತೆ ಇದ್ದು, ಸೂಕ್ತ ಚಿಕಿತ್ಸೆ ಸಿಗದೇ ಜನರು ಜಿಲ್ಲಾ ಆಸ್ಪತ್ರೆ ಸೇರಿದಂತೆ ನಗರದ ಮತ್ತು ಬೇರೆ ಬೇರೆ ಜಿಲ್ಲೆಗಳ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹೋಗುತ್ತಿದ್ದಾರೆ. ದಿನದಿಂದ ದಿನಕ್ಕೆ ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಗ್ರಾಮದ ಜನರೆಲ್ಲ ಆತಂಕಕ್ಕೊಳಗಾಗಿದ್ದಾರೆ. ಆರೋಗ್ಯ ಇಲಾಖೆ ಮಾತ್ರ ನಿದ್ದೆ ಮಾಡುತ್ತಿದೆ. ಕೂಡಲೆ ನಿದ್ದೆಯಿಂದ ಎಚ್ಚೇತ್ತು ಜನರ ಆರೋಗ್ಯದ ಕಡೆ ಗಮನಹರಿಸಬೇಕೆಂದರು. ಗ್ರಾಮದ ಜನತೆಯಲ್ಲಿ ಸ್ವಚ್ಚತೆಗೆ ಆಧ್ಯತೆ ನೀಡುವಂತೆ ಕರೆ ನೀಡಿದರು.  
ನಂತರ ನಗರದಲ್ಲಿನ ಜಿ.ಆರ್.ಖಾಸಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿರುವ ಚಿಕ್ಕಬಗನಾಳ ಗ್ರಾಮದ ೨೦ ಕ್ಕೂ ಹೆಚ್ಚು ರೋಗಿಗಳನ್ನ ಬೇಟಿಮಾಡಿ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಅಲ್ಲಾಸಾಬ ಚಿಕ್ಕಬಗನಾಳ, ನರಸಿಂಗೌಡ ದಳಪತಿ, ನರಸಪ್ಪ, ಮಂಜುನಾಥಗೌಡ, ರಾಮಣ್ಣ ಚೌಡ್ಕಿ, ಸಿದ್ದನಗೌಡ ಮಾಲಿಪಾಟೀಲ, ವೀರುಪಾಕ್ಷಪ್ಪ ಹೂಗಾರ, ಶೇಖಪ್ಪ ಬಂಗಾಳಿ, ಹುಚ್ಚನಗೌಡ ಹಲಗೇರಿ, ಬಸರಡ್ಡಿ ಕರಮೂಡಿ ಸೇರಿದಂತೆ ಇನ್ನಿತರರು ಇದ್ದರು.

Leave a Reply

Top