ಕೊಪ್ಪಳ : ತಾಲೂಕಿನ ಚಿಕ್ಕಬಗನಾಳ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ನರಸಿಂಹೇಶ್ವರ ಕ್ರಿಕೆಟ್ ಕ್ಲಬ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕ್ರಿಕೆಟ್ ಪಂದ್ಯಾವಳಿಗೆ ಗ್ರಾಮದ ಹಿರಿಯ ಮುಖಂಡರಾದ ಬನ್ನೆಪ್ಪಗೌಡ ಕೆ.ಪೊಲೀಸ್ ಪಾಟೀಲ್ ಹಾಗೂ ಬಸವರಾಜ ಬಂಗಾಳಿ ಅವರು ರವಿವಾರ ಚಾಲನೆ ನೀಡಿದರು.
ಪಂದ್ಯಾವಳಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಬನ್ನೆಪ್ಪಗೌಡ ಕೆ.ಪೊಲೀಸ್ ಪಾಟೀಲ್ ಅವರು, ಯುವಜನತೆಗೆ ಮೊಬೈಲ್ಗಳಿಗೆ ಮಾರು ಹೋಗದೆ ಕ್ರಿಕೇಟ್, ಕಬ್ಬಡ್ಡಿ, ವಾಲಿಬಾಲ್ ನಂತಹ ಒಲವು ತೋರಬೇಕು. ಕ್ರೀಡೆಯಲ್ಲಿ

ಭಾಗವಹಿಸುವುದರಿಂದ ದೇಹ, ಮನಸ್ಸು ಸದೃಢವಾಗುತ್ತದೆ. ಗ್ರಾಮದಲ್ಲಿ ಸುಮಾರು ಸತತ ೧೫ ವರ್ಷಗಳಿಂದ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸುತ್ತ ಬಂದಿದ್ದು ನಿಜಕ್ಕೂ ಸಂತಸ ತಂದಿದೆ ಎಂದರು. ನಂತರ ಎಸ್ಡಿಎಂಸಿ ಅಧ್ಯಕ್ಷ ಎಂ.ಡಿ.ಬೆಟಗೇರಿ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಅದರಲ್ಲಿ ಪಾಲ್ಗೊಳ್ಳುವುದು ಬಹುಮುಖ್ಯವಾಗಿದೆ. ಆಟಗಳೆಂದರೇ ಒಬ್ಬರು ಸೋಲೊಪ್ಪಲೇಬೇಕು. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗಬಾರದು. ಎಲ್ಲವನ್ನು ಸಮನಾಗಿ ಸ್ವೀಕರಿಸಿ ಮುನ್ನುಗ್ಗಬೇಕು. ಆಗ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವ ಮುನ್ನ ಕಠಿಣ ಪರಿಶ್ರಮ ಅಗತ್ಯವಾಗಿ ಬೇಕಾಗುತ್ತದೆ. ಕ್ರೀಡಾಪಟುಗಳು ಅತ್ಯಂತ ಶಿಸ್ತುಬದ್ಧವಾಗಿ ಪಾಲ್ಗೊಳ್ಳುವ ಮೂಲಕ ಸಾಧನೆ ಮೇರೆಯಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಕನಕಪ್ಪ ಮುಂಡರಗಿ, ರಾಮಣ್ಣ ಚೌಡ್ಕಿ, ದಾದಾಪೀರ ಬೆಟಗೇರಿ, ರಾಜಕುಮಾರ, ಹುಸೇನಪ್ಪ, ಶೇಖಪ್ಪ ಬಂಗಾಳಿ, ಮಾರುತಿ ಪಿ, ಮಂಜುನಾಥ ಪೊ.ಪಾ., ಗುರಾಜ ಮಾ.ಪಾ., ಬಸವರಾಜ ಪೊ.ಪಾ., ನಾಗರಾಜ ಉಬ್ಬಲಗುಂಡಿ, ಕೃಷ್ಣಪ್ಪ ಮ್ಯಾಗೇರಿ, ರಾಜಾಸಾಬ ಪೀಂಜಾರ, ಪತ್ರಕರ್ತ ರವಿಚಂದ್ರ ಬಿ.ಬಡಿಗೇರ, ರಾಮಣ್ಣ ನಿಂಗಾಪೂರ, ಅಶೋಕ ದಾಸರ, ನಿಂಗರಾಜ ವೀರಾಪುರ, ಕ್ರಿಕೆಟ್ ಕ್ಲಬ್ನ ಮುಖ್ಯಸ್ಥರಾದ ಶಂಕರಗೌಡ, ಜಗದೀಶಗೌಡ, ಮುಕ್ಕಣ್ಣ, ನಿಂಗನಗೌಡ ಅನೇಕರು ಪಾಲ್ಗೊಂಡಿದ್ದರು. ಈ ಕ್ರೀಡೆಯಲ್ಲಿ ೫ ಗ್ರಾಮ ಪಂಚಾಯತಿ ವ್ಯಾಪ್ತಿಯ ಕ್ರೀಡಾಪಟುಗಳು ಪಾಲ್ಗೊಂಡಿದ್ದು, ಒಟ್ಟು ೩೪ ತಂಡಗಳು ಭಾಗವಹಿಸಿವೆ.
