You are here
Home > Koppal News > ಚಿಕ್ಕಬಗನಾಳ ಏತ ನೀರಾವರಿ ಯೋಜನೆಗೆ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಬೇಟಿ

ಚಿಕ್ಕಬಗನಾಳ ಏತ ನೀರಾವರಿ ಯೋಜನೆಗೆ ಶಾಸಕ ಕೆ ರಾಘವೇಂದ್ರ ಹಿಟ್ನಾಳ ಬೇಟಿ


ಕೊಪ್ಪಳ ೦೩- ಸಣ್ಣ ನೀರಾವರಿ ಇಲಾಖೆಯಿಂದ ೨೦೧೦ರಲ್ಲಿ ಚಿಕ್ಕಬಗನಾಳ ಏತನೀರಾವರಿ ಯೋಜನೆಯು ಕಾಮಾಗಾರಿ ಪೊರ್ಣಗೊಂಡಿದರು ಸಹ ಹಲವಾರು ನ್ಯೂನತೆಗಳಿಂದಾಗಿ ರೈತರಿಂದ ದಿನ ಪ್ರತಿ ದೂರುಗಳು ಬರುತ್ತಿದ್ದು ಸರಿಯಾಗಿ ರೈತರ ಹೊಲದ ಬೆಳೆಗಳಿಗೆ ಸೂಕ್ತವಾಗಿ ನೀರು ಸರಬರಾಜು ಇರುವದಿಲ್ಲಾ ಪ್ರಯುಕ್ತ ಚಿಕ್ಕಬಗನಾಳ ಏತನೀರಾವಿ ಯೋಜನೆಗೆ ಇಂದು ಕೊಪ್ಪಳದ ಶಾಸಕರಾದ ಶ್ರೀ ಕೆ.ರಾಘವೇಂದ್ರ ಹಿಟ್ನಾಳರವರು ಸ್ಥಳಕ್ಕೆ ಬೇಟೆ ನೀಡಿ ಸ್ಥಳದಲ್ಲಿದ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರು, ಹಾಗೂ ಕಿರಿಯ ಅಭಿಯಂತರ ಅಧಿಕಾರಿಗಳಿಗೆ ಸಂಪೂರ್ಣವಾಗಿ ಕೆನಾಲ & ಕಾಲುವೆಯನ್ನು ಮತ್ತು ಸಿಸ್ಟ್ರನ್, ಪೈಪುಗಳನ್ನು ಪುನಃ ಸರ್ವೆ ನಡಿಸಿ ಅಂದಾಜು ಪತ್ರಿಕೆ ತಯಾರಿಸಿ ಸರಕಾರಕ್ಕೆ ಸಲ್ಲಿಸಲು ಸೂಚಿಸಿದರು, ಹಾಗೂ ಪುನಃ ಸವೆಗಳಲ್ಲಿ ನ್ಯೂನತೆಗಳು ಕಂಡುಬರದ ಹಾಗೆ ಜಾಗೃತೆಯಿಂದ ಹಾಗೂ ಸ್ಥಳೀಯ ರೈತರನ್ನು ವಿಶ್ವಾಸಕ್ಕೆ ಪಡೆದು ಸರ್ವೆಮಾಡಿಸಲು ಸುಚಿಸಿದರು.
ಈ ಸಂದರ್ಭದಲ್ಲಿ ಗ್ರಾ ಪಂ ಅಧ್ಯಕ್ಷರಾದ ಬಸಣ್ಣ ಬಂಗಾಳಿ, ನಗರಸಭೆ ಸದಸ್ಯ ಅಕ್ಬರಪಾಷಾ ಪಲ್ಟನ, ಸಣ್ಣ ನೀರಾವರಿ ಇಲಾಕೆಯ ಅಧಿಕಾರಿಗಳಾದ ಬಿ.ಟಿ. ಮೋಹನ ಸಹಾಯಕ ಕಾರ್ಯಪಾಲಕ ಅಭಿಯಂತರರು. ಕೋಟ್ರಬಸಪ್ಪ ಕಿರಿಯ ಅಭಿಯಂತರರು, ರಾಮಣ್ಣ ಬಂಗಾಲಿ, ಸೋಮಣ್ಣ ಬಾರಕೇರ್, ಹೊನ್ನಪ್ಪ ಗೌಡ್ರು, ಅಲ್ಲಾಸಾಬ ಗೊಂಧಿ ಹೊಸಳ್ಳಿ, ರಾಮಣ್ಣ ಚೌಡ್ಕಿ, ಜಗಧೀಶ ಕರ್ಕಿಹಳ್ಳಿ, ರಾಮಣ್ಣ ಭಜಂತ್ರಿ, ದಾದಪಿರ ಬೇಟಗೇರಿ, ವೀರಯ್ಯ ಸ್ವಾಮಿ, ಇನ್ನು ಅನೇಕ ರೈತರು ಉಪಸ್ತಿತರಿದರು.

Top