ಚಳವಳಿಯ ಜೀವಾಳ ಗೌರಿ ಲಂಕೇಶ್ -ಹುಲಿಕುಂಟೆ ಮೂರ್ತಿ

 ಸಾಹಿತ್ಯ ಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದಿಂದ ಆಯೋಜಿಸಿದ್ದ ನಾನೂ ಗೌರಿ – ಗೌರಿ ಎಂಬ ಚೇತನ ಸ್ಮರಣೆ ಮತ್ತು ಸಂವಾದ ಕಾರ್ಯಕ್ರಮ ಉದ್ದೇಶಿಸಿ ಭಾನುವಾರ ಮಾತನಾಡಿದ ಲೇಖಕ ಹುಲಿಕುಂಟೆ ಮೂರ್ತಿ ಮಾತನಾಡಿ, ಚಳವಳಿಯ ಜೀವಾಳ ಗೌರಿ ಲಂಕೇಶ್. ಕರ್ನಾಟಕದಲ್ಲಿ ನಡೆಯುವ ಎಲ್ಲಾ ಚಳವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಗೌರಿಯವರು ಬಾಬಾ ಬುಡನ್‌ಗೌರಿ ಸೇರಿದಂತೆ ನಾಡಿನ ಸೌಹಾರ್ದ ಪರಂಪರೆಗಳ ಉಳಿವಿಗಾಗಿ ಅವರಿತ ಶ್ರಮಿಸಿದವರು. ಬಡವರ, ದುಡಿಯುವವರ, ದಲಿತ ಮತ್ತು ಅಲ್ಪಸಂಖ್ಯಾತರ ಪರವಾದ ಧ್ವನಿಯ ರೀತಿಯಲ್ಲಿ ಪತ್ರಿಕೆಯನ್ನು ರೂಪಿಸಿದರು. ದಲಿತ ಯುವನಾಯಕ ಜಿಗ್ನೇಶ್ ಮೇವಾನಿ ಮತ್ತು ಕಮ್ಯುನಿಷ್ಟ್ ಚಳವಳಿಯ ಯುವನೇತಾರ ಕನ್ನಯ್ಯ ಕುಮಾರ್ ಅವರನ್ನು ಮಗನೆಂದು ಕರೆದಾಗ ಅವರ ವಿರುದ್ಧ ದೇಶದಾದ್ಯಂತ ಶತ್ರುಗಳು ಹುಟ್ಟಿಕೊಂಡರು. ಅಲ್ಲದೇ, ಅವರನ್ನು ನಿಂದಿಸಲೆಂದೇ ಸಾಮಾಜಿಕ ಜಾಲತಾಣಗಳಲ್ಲಿ ಸಾಗರೋಪಾದಿಯಲ್ಲಿ ವಿಕೃತಿಗಳು ಕೆಲಸ ಮಾಡತೊಡಗಿದವು. ಆದರೆ, ಗೌರಿ ಲಂಕೇಶ್ ಆಶಯದಂತೆ ಕರ್ನಾಟಕದಲ್ಲಿ ಯುವಸಮುದಾಯ ಝಂಢಾ ಮತ್ತು ಅಜೇಂಡಾಗಳಾಚೆ ಐಕ್ಯ ಹೋರಾಟವನ್ನು ರೂಪಿಸಲು ಭೂಮಿಕೆ ಸಿದ್ಧವಾಗುತ್ತದೆ ಎಂದರು.

ಗೌರಿ ಲಂಕೇಶ್ ಸಿದ್ದರಾಮಯ್ಯ ಅವರ ಸರಕಾರವನ್ನು ಹೆಚ್ಚು ನಂಬಿದ್ದರು, ಕೋಮುವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಲು ಕಾಂಗ್ರೇಸ್ ಸರಕಾರವನ್ನು ಬೆಂಬಲಿಸಿದ್ದರು..ಕೂಡ. ಆದರೆ ಅದೆ ಕಾಂಗ್ರೇಸ್ ಸರಕಾರ ಅವರ ಹತ್ಯೆಯ ಶೋಧ ಕಾರ್ಯವನ್ನು ಎಷ್ಟು ಲಘುವಾಗಿ ಪರಿಗಣಿಸಿದೆ ಎಂದರೆ ನಿನ್ನೆ ಕೆಲವರ ಸ್ಕೆಚ್ ಬಿಡುಗಡೆ ಮಾಡಿ ಕೊಲೆಗಡುಕರನ್ನು ಪತ್ತೆ ಹಚ್ಚಲು ಸಾರ್ವಜನಿಕರ ನೆರವು ಕೇಳಿರುವುದು ಹಾಸ್ಯಾಸ್ಪದ ಎಂದರು.

Please follow and like us:
error