ಚಪ್ಪಾಳೆ ಬೇಡ ಸೌಲಭ್ಯ ಕೊಡಿ- ವೈದ್ಯರ,ನರ್ಸಗಳ ಒತ್ತಾಯ

ಕೊಪ್ಪಳ : ಕಾಯಿಸಿದ್ದು ಸಾಕು ಖಾಯಂಮಾತಿ ಬೇಕು,ಸಮಾನ ಹುದ್ದೆಗೆ ಸಮಾನ ವೇತನ ನೀಡಿ ಭದ್ರತೆ ಕೊಡಿ ತಾರತಮ್ಯ ಬೇಡಿ ಚಪ್ಪಾಳೆ ಬೇಡ ಸೌಲಭ್ಯ ಕೊಡಿ ಎಂದು ಆಗ್ರಹಿಸಿ  ಕೊಪ್ಪಳ ತಾಲೂಕಿನ ಆರೋಗ್ಯ ಇಲಾಖೆಯ  ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ  ಗುತ್ತಿಗೆ ಮತ್ತು ಹೊರಗುತ್ತಿಗೆ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯವರು ಕಪ್ಪು ಬಟ್ಟೆ ಧರಿಸಿ 9ನೇ  ದಿನವಾದ ಇಂದು ಪ್ರತಿಭಟನೆ ನಡೆಸಿದರು ….ಸರಕಾರದಿಂದ ಯಾವುದೇ ಭದ್ರತೆ ಇಲ್ಲದೆ ಕೆಲಸ ಮಾಡುವ ಸ್ಥಿತಿ ಎದುರಾಗಿದ್ದು ಒಟ್ಟು 14ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು ಮುಂದಿನ ದಿನಮಾನಗಳಲ್ಲಿ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರವಾದ ಹೋರಾಟ ಮಾಡುವದಾಗಿ ಎಚ್ಚರಿಸಿದರು . 22ರಿಂದ ಉಪವಾಸ ಸತ್ಯಾಗ್ರಹ ಮಾಡುವುದಾಗಿ ತಿಳಿಸಿದ್ದಾರೆ. ಇದಕ್ಕೂ ಸರಕಾರ ಸ್ಪಂದಿಸದಿದ್ದರೆ ಕೆಲಸಕ್ಕೆ ರಾಜೀನಾಮೆ ನೀಡುವುದಾಗಿ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ಡಾ.ಮಹೇಶ ಉಮಚಗಿ ,ಸಂದ್ಯಾ ಕೆ.ಆರ್ .ಪ್ರಭುರಾಜ .ಪ್ರಮೋದ.ಸಂತೋಷ.ವಿನೋದ . ವಿದ್ಯಾ. ಶೋಭಾ.ಸರಿತಾ.ಡಾ.ಪ್ರಿಯಾಂಕ.ಡಾ.ಗೀತಾ.ನೀಲಗಂಗಾ .ಸವಿತಾ.ರಾಜೇಶ್ವರಿ.ಉತ್ತಮ.ವಿನೋದ ಹಾಗೂ ಇನ್ನಿತರ ಸಿಬ್ಬಂದಿಗಳು ಬಾಗವಹಿಸಿದ್ದರು

Please follow and like us:
error