fbpx

ಚಕೋರ ೧೪೧ ಕವಿಕಾವ್ಯ ವಿಚಾರ ವೇದಿಕೆ


ಕೊಪ್ಪಳ : ನಗರದ ಸರಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಾಯೋಜಿತ ಚಕೋರ ೧೪೧ ಕೊಪ್ಪಳ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಮೊದಲಿಗೆ ಹೋರಾಟಗಾರ ಶಿವಾನಂದ ಹೂದ್ಲೂರು ಹಾಗೂ ಗದುಗಿನ ಶ್ರೀ ತೊಂಟದಾರ್ಯ ಸ್ವಾಮಿಜಿಯವರ ನಿಧನಕ್ಕೆ ಸಚಿತಾಪ ಸೂಚಕ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಗುಜಲ್ ಗಾಯನ ಮತ್ತು ಕವಿಗೋಷ್ಠಿಯಲ್ಲಿ ಅನೇಕ ಗಾಯಕರು, ಕವಿಗಳು ಪಾಲ್ಗೊಂಡಿದ್ದರು. ಚಕೋರ ಕೋಲಾರ ಬಳಗದಿಂದ ಸಾಹಿತಿ ಕೆ.ಎನ್. ಮಂಜುನಾಥ ಕಾರ್ಯಕ್ರಮವನ್ನು ಉದ್ಘಾಟಿಸಿ ಬಂಡಾಯ ಕವಿತೆಗಳ ಕುರಿತು ಮಾತನಾಡಿದರು. ನಂತರ ಕವಿದಾಸ ತಮ್ಮೇನಹಳ್ಳಿ ತಮ್ಮ ಬಂಡಾಯ ಕವಿತೆಯನ್ನು ಓದಿದರು. ಅಧ್ಯಕ್ಷತೆಯನ್ನು ವಹಿಸಿದ್ದ   ಸಾಹಿತಿಗಳಾದ ಅಕಬ್ರ ಕಾಲಿಮಿರ್ಚಿಯವರು ಎಲ್ಲ ಕವಿತೆಗಳ ವಿಮರ್ಶೆ ಮಾಡಿದರು.
ಶ್ರೀಮತಿ ಪುಷ್ಟಲತಾ ನಿರೂಪಿಸಿದರು, ವಿಜಯಲಕ್ಷ್ಮೀ ಕೊಟಗಿ ಸ್ವಾಗತಿಸಿದರು, ಅನ್ನಪೂರ್ಣ ವನ್ನಾಪೂರ ಪ್ರಾರ್ಥಿಸಿದರು, ಡಿ.ಎಂ. ಬಡಿಗೇರ ವಂದಿಸಿದರು, ಈ ಕಾರ್ಯಕ್ರಮದಲ್ಲಿ ಅನೇಕ ಹಿರಿಯ ಕವಿತೆಗಳು ಉಪಸ್ಥಿತರಿದ್ದರು.

Please follow and like us:
error
error: Content is protected !!