ಗ್ರಾ.ಪಂ ನಾಮನಿರ್ದೇಶನ ತಡೆಯಲು ಶಿವರಾಜ್ ತಂಗಡಗಿ ಮನವಿ

ಕೊಪ್ಪಳ ‘: ಗ್ರಾಮ ಪಂಚಾಯತ್ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವುದನ್ನು ತಡೆಯಲು ಆಗ್ರಹಿಸಿ ಕಾಂಗ್ರೆಸ್ ಪಕ್ಷ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷ ಶಿವರಾಜ್ ತಂಗಡಗಿ ನೇತೃತ್ವದಲ್ಲಿ ಗಂಗಾವತಿ, ಕಾರಟಗಿ ಹಾಗೂ ಕನಕಗಿರಿ ತಾಲೂಕು ಪಂಚಾಯತ್ ಸದಸ್ಯರ ನಿಯೋಗದೊಂದಿಗೆ ಕೊಪ್ಪಳ‌ ಜಿಲ್ಲಾಧಿಕಾರಿಗಳ ಬಳಿ ತೆರಳಿ, ಗ್ರಾಮ ಪಂಚಾಯತ್ ಗಳಿಗೆ ಬಿ.ಜೆ.ಪಿ.‌ ಸದಸ್ಯರನ್ನು ನಾಮನಿರ್ದೇಶನ ಮಾಡುವುದನ್ನು ತಡೆಹಿಡಿಯುವುದರ ಕುರಿತು, ಕನಕಗಿರಿ ವಿಧಾನಸಭಾ ಕ್ಷೇತ್ರದ, ಬೋಗಸ್ ಬಿಲ್ ಎತ್ತುವಳಿ ಕುರಿತು ತನಿಖೆಗಾಗಿ, ಗಂಗಾವತಿ ತಾ.ಪಂ. ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣಾ ದಿನಾಂಕ ನಿಗಧಿಗಾಗಿ ಹಾಗೂ ನೂತನವಾಗಿ ಕಾರ್ಯಾರಂಭ ಮಾಡಿರುವ ಕನಕಗಿರಿ ಹಾಗೂ ಕಾರಟಗಿ ತಾ.ಪಂ. ಗಳಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿಪಡಿಸಿ, ಸದರಿ ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲು, ಸೂಕ್ತ‌ಕ್ರಮಕೈಗೊಳ್ಳುವಂತೆ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಕೃಷ್ಣ ಇಟ್ಟಂಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error