ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ


ಕೊಪ್ಪಳ ನ. : ಕೊಪ್ಪಳ ನಗರದ ಸಾಹಿತ್ಯ ಭವನದ ಬಳಿಯಿರುವ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿ ಇಂದು ರಾಷ್ಟಿçಯ ಗ್ರಂಥಾಲಯ ಸಪ್ತಾಹಕ್ಕೆ ಚಾಲನೆ ನೀಡಲಾಯಿತು.
ರಾಷ್ಟಿçÃಯ ಗ್ರಂಥಾಲಯ ಸಪ್ತಾಹವು ಇಂದಿನಿAದ (ನವೆಂಬರ್ 14 ರಿಂದ 20ರವರೆಗೆ) ಜರುಗಲಿದೆ.  ಪುಸ್ತಕ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಈ ಪುಸ್ತಕ ಪ್ರದರ್ಶನದಲ್ಲಿ ಸಾಹಿತ್ಯ, ಮಾರ್ಗದರ್ಶಕ ಸೇರಿದಂತೆ ವಿಶ್ವಕೋಶ, ಗೆಜೆಟಿಯರ್, ಮಕ್ಕಳ ಸಾಹಿತ್ಯ ಸೇರಿದಂತೆ ಸಾಹಿತ್ಯದ ಪ್ರಕಾರದ ಪುಸ್ತಕಗಳನ್ನು ಇರಿಸಲಾಗಿದೆ.
ಪುಸ್ತಕ ಪ್ರದರ್ಶನಕ್ಕೆ ಮುಖ್ಯ ಗ್ರಂಥಾಲಯಾಧಿಕಾರಿ ಶಂಕರಗೌಡ ಹಳ್ಯಾಳ ಚಾಲನೆ ನೀಡಿದರು.  ಭಾರತೀಯ ಗ್ರಂಥಾಲಯದ ಪಿತಾಮಹ ಡಾ.ಎಸ್.ಆರ್. ರಂಗನಾಥನ್ ಮತ್ತು ಸರಸ್ವತಿ ಭಾವಚಿತ್ರಕ್ಕೆ ಪ್ರಥಮದರ್ಜೆ ಸಹಾಯಕ  ನರಸಿಂಹಮೂರ್ತಿ ಪೂಜೆ ಸಲ್ಲಿಸಿದರು. ಹಿರಿಯ ಓದುಗರಾದ ಶಿವಪುತ್ರಪ್ಪ, ಹನುಮಂತಪ್ಪ ದೀಪ ಬೆಳಗಿಸಿದರು. ಗ್ರಂಥಾಲಯ ಸಹಾಯಕ ನಾಗರಾಜನಾಯಕ ಡಿ.ಡೊಳ್ಳಿನ, ವಿಜಯಲಕ್ಷ್ಮೀ ವಡ್ಡಟ್ಟಿ ಸಿಬ್ಬಂದಿಗಳು ಹಾಗೂ ಓದುಗರಾದ ಮಹೇಶ, ದೀಪಕ್, ವೆಂಕಟೇಶ, ದುರುಗಪ್ಪ ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Please follow and like us:
error