ಗ್ಯಾಸ್ ಸೋರಿಕೆ ಬೆಂಕಿಗಾಹುತಿಯಾದ ವಾಹನ

ಕೊಪ್ಪಳ : ಗ್ಯಾಸ್ ಸೋರಿಕೆಯಿಂದ ಟಾಟಾ ಮ್ಯಾಜಿಕ್ ವಾಹನಕ್ಕೆ ಬೆಂಕಿ ಹತ್ತಿಕೊಂಡು ಸಂಪೂರ್ಣವಾಗಿ ಸುಟ್ಟು ಹೋದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಟಾಟಾ ಮ್ಯಾಜಿಕ್ ವಾಹನ ಧಗಧಗನೆ ಉರಿಯುವ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿವೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆರೂರು ಗ್ರಾಮದಲ್ಲಿ ಘಟನೆ ನಡೆದಿದ್ದು ಶರಣಪ್ಪ ವಂಕಲಕುಂಟಿ ಎನ್ನುವವರಿಗೆ ಸೇರಿದ ವಾಹನಕ್ಕೆ ಹತ್ತಿದ ಬೆಂಕಿಯಿಂದ ಅಂಗಡಿಗಳಿಗೂ ಬೆಂಕಿ ತಗುಲಿದೆ ಇದರಿಂದಾಗಿ

ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಅದೃಷ್ಠವಶಾತ್ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ. ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.