ಗೌರಿ ಗಣೇಶ ಹಬ್ಬ ಆಚರಣೆ : ಮದ್ಯ ಮಾರಾಟ ನಿಷೇಧ


ಕೊಪ್ಪಳ ಆ. : ಸೆಪ್ಟೆಂಬರ್. 02 ರಿಂದ ಗೌರಿ-ಗಣೇಶ ಹಬ್ಬ ಜರುಗಲಿದ್ದು, ಹಬ್ಬ ಆಚರಣೆ ಸಂದರ್ಭದಲ್ಲಿ  ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮದ್ಯ ಮಾರಾಟ ನಿಷೇಧಿಸಿ ಮದ್ಯದಂಗಡಿಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಆದೇಶಿಸಿದ್ದಾರೆ.
ಗಣೇಶ ವಿಸರ್ಜನೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.  ಅಲ್ಲದೇ ಸೆ. 01 ರಿಂದ ಮುಸ್ಲಿಂ ಬಾಂಧವರಿಂದ ಮೊಹರಂ ಹಬ್ಬ ಆಚರಿಸಲಾಗುತ್ತಿದೆ. ಈ ಎರಡೂ ಹಬ್ಬಗಳ ಆಚರಣೆ ಸಮಯದಲ್ಲಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಕಾಪಾಡಲು ಮದ್ಯ ಮಾರಾಟವನ್ನು ಈ ಕೆಳಕಂಡ ದಿನಗಳಂದು ನಿಷೇಧಿಸಲಾಗಿದೆ.
ಗಣೇಶ ವಿಸರ್ಜನೆಯ ಮೊದಲನೇ ದಿನದ ಅಂಗವಾಗಿ ಸೆಪ್ಟೆಂಬರ್. 01 ರಂದು ರಾತ್ರಿ 12-00 ಗಂಟೆಯಿಂದ ಸೆ. 02ರ ರಾತ್ರಿ 12-00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮದ್ಯಪಾನ ನಿಷೇಧಿಸಲಾಗಿದೆ.  ಗಣೇಶ ವಿಸರ್ಜನೆಯ 3ನೇ ದಿನದ ಅಂಗವಾಗಿ ಸೆ. 03ರ ರಾತ್ರಿ 12-00 ರಿಂದ ಸೆ. 04ರ ರಾತ್ರಿ 12-00 ರವರೆಗೆ, 5ನೇ ದಿನದ ಗಣೇಶ ವಿಸರ್ಜನೆಯ ಅಂಗವಾಗಿ  ಸೆ. 05ರ ರಾತ್ರಿ 12-00 ಗಂಟೆಯಿಂದ ಸೆ. 06ರ ರಾತ್ರಿ 12-00 ರವರೆಗೆ, 7ನೇ ದಿನದ ಗಣೇಶ ವಿಸರ್ಜನೆಯ ಅಂಗವಾಗಿ  ಸೆ. 07ರ ರಾತ್ರಿ 12-00 ರಿಂದ ಸೆ. 08ರ ರಾತ್ರಿ 12-00 ಗಂಟೆಯವರೆಗೆ, 9ನೇ ದಿನದ ಗಣೇಶ ವಿರ್ಸಜನೆ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಸೆ. 09 ರಂದು ರಾತ್ರಿ 12-00 ಗಂಟೆಯಿಂದ ಸೆ. 10ರ ರಾತ್ರಿ 12-00 ರವರೆಗೆ, 11ನೇ ದಿನದ ಗಣೇಶ ವಿರ್ಸಜನೆ ಅಂಗವಾಗಿ ಸೆ. 11ರ ರಾತ್ರಿ 12-00 ರಿಂದ ಸೆ. 12ರ ರಾತ್ರಿ 12-00 ಗಂಟೆಯವರೆಗೆ ಜಿಲ್ಲೆಯಾದ್ಯಂತ ಮಧ್ಯಪಾನ, ಮದ್ಯ ಮಾರಾಟ ನಿಷೇಧಿಸಲಾಗಿದೆ.  ಈ ಸಂಬಂಧ ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿದ್ದು, ಅದರಲ್ಲಿ ಆರಕ್ಷಕ ವೃತ್ತ ನಿರೀಕ್ಷಕರು, ಅಬಕಾರಿ ವೃತ್ತ ನಿರೀಕ್ಷಕರು ಕಾರ್ಯನಿರ್ವಹಿಸಲು ಆದೇಶಿಸಿದೆ.  ಈ ಆದೇಶವನ್ನು ಜಾರಿಗೆ ತರುವಲ್ಲಿ ನಿರ್ಲಕ್ಷö್ಯತನ ತೋರಿದವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Please follow and like us:
error