ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೆಹಿಯಾಗಿ ಆಚರಿಸಿ : ಮಂಜುನಾಥ ಮನವಿ

ಕೊಪ್ಪಳ ಆ.  ಕೊಪ್ಪಳ ಜಿಲ್ಲೆಯಾದ್ಯಂತ ಗೌರಿ-ಗಣೇಶ ಹಬ್ಬವನ್ನು ಪರಿಸರ ಸ್ನೆÃಹಿಯನ್ನಾಗಿ ಆಚರಿಸುವಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ, ಕೊಪ್ಪಳ ಪರಿಸರ ಅಧಿಕಾರಿ ಮಂಜುನಾಥ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ.  ಪ್ಲಾಸ್ಟರ್ ಆಫ್ ಪ್ಯಾರಿಸ್ ಬಣ್ಣಲೇಪಿತವಾದಂತಹ ವಿಗ್ರಹಗಳನ್ನು ಕೆರೆ ಮತ್ತು ಇತರೆ ಜಲ ಮೂಲಗಳಲ್ಲಿ ವಿಸರ್ಜನೆಯನ್ನು ಮಾಡುವುದರಿಂದ ನೀರು ಕಲುಶಿತಗೊಂಡು ಜಲ ಮೂಲಗಳ ಮೇಲೆ ಅವಲಂಭಿತವಾದ ಪಶು, ಪಕ್ಷಿÃ, ಪ್ರಾಣಿಗಳು ಮತ್ತು ಇತರೆ ಜಲಚರಗಳ ಜೀವನಕ್ಕೆ ಅಪಾಯವುಂಟಾಗುವುದರೊಂದಿಗೆ ಪರಿಸರಕ್ಕೆ ಮತ್ತು ಸಾರ್ವಜನಿಕರ ಆರೋಗ್ಯಕ್ಕೆ ದಕ್ಕೆ ಉಂಟಾಗುತ್ತದೆ.  ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು 2016 ಜುಲೈ. 20ರ ತನ್ನ ಅಧಿಸೂಚನೆಯಲ್ಲಿ ಯಾವುದೇ ಜಲ ಮೂಲಗಳಲ್ಲಿ ಪಿಒಪಿ ನಿಂದ ಮಾಡಿದ ಬಣ್ಣ ವಿಗ್ರಹಗಳ ವಿಸರ್ಜನೆಯನ್ನು ನಿಷೇಧಿಸಿರುತ್ತದೆ.  ಆದುದರಿಂದ ವಿಗ್ರಹಗಳು ಮತ್ತು ಮಂಟಪಗಳನ್ನು ತಯಾರಿಸುವ ಸಂದರ್ಭದಲ್ಲಿ ನೈಸರ್ಗೀಕವಾಗಿ ತಯಾರಿಸಲಾಗಿರುವ ಹಾಗೂ ಪರಿಸರಕ್ಕೆ ಹಾನಿಯಾಗದಂತಹ ಬಣ್ಣಗಳನ್ನು ಹಾಗೂ ಸಾಮಾಗ್ರಿಗಳನ್ನು ಉಪಯೋಗಿಸುವುದಂತೆ ಸೂಚಿಸಲಾಗಿದೆ.
ನೀರಿನಲ್ಲಿ ಕರಗದ ಅಥವಾ ತೇಲುವ ಪರಿಸರಕ್ಕೆ ಹಾನಿಯಾಗಿರುವ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿ/ ಮಾರಾಟ ಮಾಡದಂತೆ ಸೂಚಿಸಲಾಗಿದೆ.  ಗಣೇಶ ಮೂರ್ತಿಗಳನ್ನು ತಯಾರಿಸುವಾಗ ನೀರಿನಲ್ಲಿ ಕರುಗುವಂತಹಾ ಬಣ್ಣಗಳು ಹಾಗೂ ವಿಷಯುಕ್ತವಲ್ಲದ ನೈಸರ್ಗೀಕ ಬಣ್ಣಗಳನ್ನು ಉಪಯೋಗಿಸುವುದು.  ಸಾರ್ವಜನಿಕರು ಸಾಧ್ಯವಾದಷ್ಟು ಚಿಕ್ಕದಾದ ಮೂರ್ತಿಗಳನ್ನು ಪೂಜೆಗೆ ಬಳಸಬೇಕು.  ತೈಲ ಬಣ್ಣಗಳು ಅಪಾಯಕಾರಿ ರಾಸಾಯನಿಕಗಳಿಂದ ಕೂಡಿರುತ್ತವೆ.  ಆದ್ದರಿಂದ ಜೆಡಿ ಮಣ್ಣಿನಿಂದ ಮಾಡಿದ ಹಾಗೂ ನೈಸರ್ಗೀಕ ಬಣ್ಣ ಬಳಸಿದ ಮೂರ್ತಿಗಳನ್ನು ಮಾತ್ರ ಖರೀದಿಸಿ.  ಗಣೇಶ ಮೂರ್ತಿಗಳನ್ನು ಸ್ಥಳೀಯ ಸಂಸ್ಥೆಯವರು ನಿರ್ಮಿಸಿದ ತಾತ್ಕಾಲಿಕ ಹೊಂಡ, ವಿಸರ್ಜನ ಸಂಚಾರಿ ವಾಹನ ಮತ್ತು ತೊಟ್ಟಿಗಳಲ್ಲಿ ವಿಸರ್ಜನೆ ಮಾಡಬೇಕು.  ಗಣೇಶ ಮೂರ್ತಿಯನ್ನು ಬಕೇಟ್‌ನಲ್ಲಿಯೂ ವಿಸರ್ಜಿಸಬಹುದು.  ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದಕ್ಕಿಂತ ಮುಂಚೆ ಮೂರ್ತಿಗಳಿಗೆ ಪೂಜೆ ಮಾಡಲು ಉಪಯೋಗಿಸಿದ ಹೂವು, ವಸ್ತç, ಅಲಂಕಾರಿಕ ಸಾಮಾಗ್ರಿಗಳನ್ನು ತಗೆದಿಡಬೇಡಿ.  ಐದು ಅಡಿಗಿಂತ ಎತ್ತರದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಬಾರದು.  ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 06 ಗಂಟೆಯವರೆಗೆ ಧ್ವನಿವರ್ಧಕಗಳನ್ನು ಬಳಸಬಾರದು.  ಗಣಪತಿ ಹಬ್ಬದ ಸಂದರ್ಭದಲ್ಲಿ ಪಟಾಗಿ ಸಿಡಿಸಬೇಡಿ.  ಪಟಾಗಿಯ ಹೊಗೆ ಮಾಲಿನ್ಯಕಾರಕ ಅಲ್ಲದೇ ರಸ್ತೆಗಳು ಕಸಮಯವಾಗುತ್ತವೆ ಮತ್ತು ಪಟಾಗಿ ಶಬ್ಧ ಕಿವಿಗೆ ಹಾನಿಕಾರವಾಗಿದೆ.  ಆದ್ದರಿಂದ ಗಣೇಶ ಹಬ್ಬವನ್ನು ಪರಿಸರ ಸ್ನೆÃಹಿಯನ್ನಾಗಿ ಆಚರಿಸುವಂತೆ   ತಿಳಿಸಿದೆ

Please follow and like us:
error