ಗೋ ಹತ್ಯೆ ನಿಷೇಧ : ನಗರದಲ್ಲಿ ಸಂಭ್ರಮಾಚರಣೆ

bjp_koppal

ಕೊಪ್ಪಳ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮೂರುವರ್ಷ ತುಂಬಿದ ಹಿನ್ನೆಲೆಯಲ್ಲಿ ಗೋ ಹತ್ಯೆ ನಿಷೇದ ಜಾರಿಮಾಡಿದ್ದು, ನಗರದ ಅಶೋಕ ವೃತ್ತದಲ್ಲಿ ಹಿಂದುಪರ ಸಂಘಟನೆಗಳು ಶುಕ್ರವಾರ ಗೋ ವಿಗೆ ಹಣ್ಣು ತಿನ್ನಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಾಚರಣೆ ಆಚರಿಸಿದರು.
ಬಿಜೆಪಿ ಮುಖಂಡ ಅಮರೇಶ ಕರಡಿ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲೂ ಈ ವಿಷಯದಲ್ಲಿ ಅನೇಕ ಘರ್ಷಣೆಗಳು, ಗಲಭೆಗಳು, ದಂಗೆಗಳು ನಡೆದ ನಿದರ್ಶನಗಳಿವೆ. ಪುರಾತನ ಕಾಲದಿಂದಲೂ ಹಿಂದೂಗಳಿಗೆ ಗೋವುಗಳು ಪವಿತ್ರ ಹಾಗೂ ಪೂಜನೀಯ. ಗೋವುಗಳು ಒಂದು ವಿಧದಲ್ಲಿ ಧಾರ್ಮಿಕ ನಂಬಿಕೆಯಿಂದ ದೇವರ ಸ್ಥಾನವನ್ನು ಅಲಂಕರಿಸಿದರೆ, ಇನ್ನೊಂದು ವಿಧದಲ್ಲಿ ಸಾಕ್ಷಾತ್ ಕಲಿಯುಗದ ಕಾಮಧೇನುವೇ. ಹಿಂದಿನ ಕಾಲದಲ್ಲಿ ದೇಶದ ಸಂಪತ್ತನ್ನು ತುಲನೆ ಮಾಡುವಾಗ ಗೋವುಗಳ ಸಂಖ್ಯೆಯು ಬಹುಮುಖ್ಯ ಪಾತ್ರ ವಹಿಸುತ್ತಿತ್ತು. ಇಂದಿಗೂ ದೇಶದ ಆರ್ಥಿಕತೆಯಲ್ಲಿ ಗೋವುಗಳ ಪಾತ್ರ ಬಹು ಮಹತ್ತರವಾಗಿದೆ. ಅಂತಹ ಗೋವುಗಳ ರಕ್ಷಣೆಗೆ ಕೇಂದ್ರ ಸರಕಾರ ಬೆನ್ನೆಲುಬಾಗಿ ನಿಂತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜು ಬಾಕಳೇ, ಶಿವಕುಮಾರ ಹಕ್ಕಾಪಕ್ಕಿ, ಬಸವರಾಜ ಈಶ್ವರಗೌಡ್ರ, ಕೃಷ್ಣಾ ಮೇಗಳಮನಿ, ರವಿಚಂದ್ರ ಮಾಲಿಪಾಟಿಲ, ಗವಿಸಿದ್ದಪ್ಪ ಜಂತಕಲ್, ಗಣೇಶ ಹೊರತಟ್ನಾಳ ಸೇರಿದಂತೆ ಇತರರು ಇದ್ದರು.

Leave a Reply