ಗೋ ಮಧುಸುದನನ್ನು ಗಡಿಪಾರಿಗೆ ಹಾಗೂ ಪೇಜಾವರ ಶ್ರೀ ಹೇಳಿಕೆಯನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಮನವಿ

ಕೊಪ್ಪಳ : ಕರ್ನಾಟಕ ದಲಿತ ಸಂಘರ್ಷ ಸಮಿತಿ, ರಿ ಪ್ರೋ. ಬಿ.. ಕೃಷ್ಣಪ್ಪ ಸ್ಥಾಪಿತ ಜಿಲ್ಲಾ ಸಮಿತಿ ವತಿಯಿಂದ ಡಾ|| ಬಿ.ಆರ್. ಅಂಬೇಡ್ಕರರವರ ಬಗ್ಗೆ ಅವಹೇಳನಕಾರಿ ಮತ್ತು ಸಂವಿಧಾನದ ಬಗ್ಗೆ ಹಗುರವಾಗಿ ಮಾತನಾಡಿದ ಗೋ ಮಧುಸುದನನ್ನು ಗಡಿಪಾರಿಗೆ ಹಾಗೂ ಪೇಜಾವರ ಶ್ರೀ ಹೇಳಿಕೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. 
ಭಾರತ ದೇಶ ಸ್ವಾತಂತ್ರ್ಯ ಬಂದಾಗಿನಿಂದ ಡಾ|| ಬಿ.ಆರ್. ಅಂಬೇಡ್ಕರರವರ ದೇಶದ ಸಂವಿದಾನವನ್ನು ರಚಿಸಿ ದೇಶಕ್ಕೆ ಸಂವಿಧಾನವನ್ನು ಅರ್ಪಣೆ ಮಾಡಿದ್ದು ಜೈನ್, ಬೌದ್ಧ, ಕ್ರೈಸ್ತ, ಸಿಕ್ಕ ದೇಶದಲ್ಲಿ ವಾಸಿಸುವ ಎಲ್ಲಾ ಧರ್ಮಗಳ ಜಾತಿ ಜನಾಂಗಕ್ಕೆ ಸಂವಿಧಾನವು ರಕ್ಷಣೆಯ ಭದ್ರಕೋಟೆಯಾಗಿರುತ್ತದೆ. ಎಕೆಂದರೆ ಸಣ್ಣ ಮತ್ತು ದೊಡ್ಡ ಧರ್ಮಗಳು ಮತ್ತು ಜಾತಿಗಳು ವ್ಯಾಜ್ಯದಲ್ಲಿ ಸಂವಿಧಾನವು ದೌರ್ಜನ್ಯ ದಬ್ಬಾಳಿಕೆ ವಿರುದ್ಧ ಸಂವಿಧಾನವು ರಕ್ಷಣೆ ಮಾಡುತ್ತಿದೆ.
ಇಂತಹ ಪವಿತ್ರವಾದ ಭಾರತದ ಸಂವಿಧಾನದ ಬಗ್ಗೆ ಗೋ ಮಧುಸುದನ್‌ರವರು ನಮ್ಮ ದೇಶದ ಸಂವಿಧಾನವನ್ನು ಒಪ್ಪುವುದಿಲ್ಲ ಎಂದು ಹಗುರವಾಗಿ ಮಾತನಾಡಿದ್ದು ಇಂತಹ ಮಾತುಗಳು ದೇಶಕ್ಕೆ ದ್ರೋಹವನ್ನು ಬಗೆದಂತೆ ಆಗುತ್ತದೆ ಆದ್ದರಿಂದ ಕೂಡಲೇ ಗೋ ಮಧುಸುದನ್‌ರವರು ಕ್ಷೇಮೆಯಾಚಿಸಬೇಕು ಮತ್ತು ಶ್ರೀ ಕೃಷ್ಣ ಉಡುಪಿ ಮಠದ ಪೇಜಾವರ ಶ್ರೀಗಳು ಕೂಡಾ ಅಂಬೇಡ್ಕರವರ ಹಾಗೂ ಸಂವಿಧಾನದ ಬಗ್ಗೆ ಕೇವಲವಾಗಿ ಮಾತನಾಡಿರುವದನ್ನು ಖಂಡಿಸುತ್ತದೆ. ಆದ್ದರಿಂದ ಸಂವಿಧಾನ ಮತ್ತು ಅಂಬೇಡಕ್ರವರ ಬಗ್ಗೆ ಅವಹೇಳನಕಾರಿ ಮಾತುಗಳನ್ನಾಡುವ ವ್ಯಕ್ತಿಗಳನ್ನು ಭದ್ರತಾ ಗುನ್ನೆ ದಾಖಲಿಸಿ ಗಡಿಪಾರು ಪಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿ ಒತ್ತಾಯಿಸಿ ಅಪಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಹಂಪೇಶ ಹರಿಗೋಲ್, ಕೆ. ವೆಂಕಟೇಶ ನೀರಲೂಂಟಿ, ಮಾರ್ಕಂಡಯ್ಯ ಹಲಗಿ, ಹೆಚ್. ಪಂಪಾಪತಿ ಸಿದ್ದಾಪೂರ, ಆರ್.ಕೆ ರಮೇಶ, ದುರಗಪ್ಪ ಕಂದಾರಿ, ಮಹಾಂತೇಶ ಮಾದಿನೂರ, ಶೇಖರಪ್ಪ ಹುಲಗಿ, ಮೋಹನ ಕೊಪ್ಪಳ ಇತರರು ಉಪಸ್ಥಿತರಿದ್ದರು.

Please follow and like us:
error