You are here
Home > Koppal News > ಗೋಶಾಲೆಯಲ್ಲಿ ದೀಪಾವಳಿ ಆಚರಣೆ

ಗೋಶಾಲೆಯಲ್ಲಿ ದೀಪಾವಳಿ ಆಚರಣೆ

ಕೊಪ್ಪಳ- 8- ಸ್ವಾಸ್ಥ್ಯ ಮನಸ್ಸಿನ ಶಕ್ತಿಗಳು ಎಂಬ ವಾಟ್ಸಾಪ್ ತಂಡದಿಂದ ಇಂದು‌ ನಗರದ ಮಹಾವೀರ ಜೈನ ಗೋಶಾಲೆಯಲ್ಲಿ ವಿಶೇಷ ಪೂಜೆ ಮತ್ತು ದೀಪಾವಳಿ ಹಬ್ಬ ಆಚರಿಸಲಾತ್ತು.
      ಸಾಮಾಜಿಕ ಜಾಲತಾಣದ ಒಂದು ತಂಡವಾದ ಸ್ವಾಸ್ಥ್ಯ ಮನಸ್ಸಿನ ಶಕ್ತಿಗಳು ತಂಡದಿಂದ ಇಂದು‌ ನಗರದ ಗೋಶಾಲೆಯಲ್ಲಿ ರಾಸುಗಳಿಗೆ ವಿಶೇಷ ಪೂಜೆ ಮಾಡಿ ಬಾಗಿನ ಸಲ್ಲಿಸಲಾಯಿತು. ಇದೇ ವೇಳೆ ಮುಂಬರವ ದಿನಗಳಲ್ಲಿ ರಾಸುಗಳಿಗೆ ಮೇವಿನ ಸಹಕಾರ ಮಾಡುವೆವೆಂಬ ಭರವಸೆಯನ್ನು ಸಾಹಿತಿ ಬಿ.ಎನ್.ಹೊರಪೇಟಿ ವ್ಯಕ್ತಪಡಿಸಿದರು. ಗೋ ಹತ್ಯ  ಸಂಪೂರ್ಣ ನಿಷೇದವಾಗಬೇಕು ಮತ್ತು ಬರಗಾಲದ ಕಾಲದಲ್ಲಿ ರೈತರಿಗೆ ಸರಕಾರ ಹೆಚ್ಚಿನ ಪ್ರಮಾಣದ ನೆರವು ನೀಡಬೇಕೆಂದು ಸಮಾಲೋಚಿಸಲಾಯಿತು ಗೋಶಾಲೆಯಲ್ಲಿನ ಸ್ವಚ್ಚತೆ ಮತ್ತು ಆರೋಗ್ಯರ ದೊಡ್ಡಿಗಳನ್ನೆಲ್ಲಾ ವಿಕ್ಷಿಸಿಲಾಯಿತು. ಇದೇ ವೇಳೆಯಲ್ಲಿ ಜನಪದ ಕೂಗು ರುವಾರಿ ಗವಿಸಿದ್ದಯ್ಯ ಹಳ್ಳಿಕೇರಿಮಠ ತಮ್ಮ ಜನಪದ ಕಾರ್ಯಕ್ರಮ ಮೂಲಕ ಗೋಶಾಲೆಯ ಪಾಲಕರಿಗೆ ಮನರಂಜನೆ ನೀಡಿದರು.
ಈ ಸಂದರ್ಭದಲ್ಲಿ ನಿರ್ದೇಶಕ ಬಿ.ಎನ್.ಹೊರಪೇಟಿ,
ಕೊಪ್ಪಳ ಕನಸು ಪತ್ರಿಕೆಯ ಸಂಪಾದಕ ಬಸವರಾಜ ಮರದೂರ ದಸ್ತಗಿರಿ ಹಾಗೂ ಗೋಶಾಲಾ ಮುಖ್ಯಾಧಿಕಾರಿ ಉಪಸ್ಥಿತಿ ಇದ್ದರು
Top