ಗೋರಂಟ್ಲಿಯವರಿಗೆ ಸಿಕ್ಕ ಪ್ರಶಸ್ತಿ ಸ್ನೇಹ ಬಳಗಕ್ಕೆ ಸಂದ ಗೌರವ- ಬೆಟ್ಟದೂರ

ಕೊಪ್ಪಳ : ನಿರಂತರವಾದ ಹೋರಾಟಗಳ ಮೂಲಕ ಕೊಪ್ಪಳ ಜಿಲ್ಲೆಯು ರಾಜ್ಯಾದ್ಯಂತ ಹೆಸರು ಮಾಡಿದೆ. ಗೋಕಾಕ ಚಳುವಳಿ, ಕುದ್ರಿಮೋತಿ ಹೋರಾಟ, ಜಿಲ್ಲಾ ಹೋರಾಟಗಳು, ಕಾರ್ಮಿಕ ಹೋರಾಟ ಹೀಗೆ ಸತತ ಹೋರಾಟಗಳಲ್ಲಿ ನಮ್ಮ ಜಿಲ್ಲೆಯ ಎಲ್ಲಾ ಪ್ರಗತಿಪರ ಮನಸ್ಸುಗಳು ಒಂದಾಗಿ ಹೋರಾಟ ಮಾಡಿವೆ. ಈ ಎಲ್ಲಾ ಹೋರಾಟಗಳಲ್ಲಿ ವಿಠ್ಠಪ್ಪ ಗೋರಂಟ್ಲಿಯವರೂ ಪ್ರಮುಖ ಪಾತ್ರವಹಿಸಿದ್ದಾರೆ. ಕೇವಲ ಹೋರಾಟಗಳು ಮಾತ್ರವಲ್ಲ ಸಾಹಿತ್ಯ, ಮಾದ್ಯಮ ಕ್ಷೇತ್ರಗಳಲ್ಲಿಯೂ ಗೋರಂಟ್ಲಿಯವರು ತಮ್ಮದೇ ಛಾಪು ಮೂಡಿಸಿದ್ದಾರೆ.  ಹೀಗಾಗಿ ಗೋರಂಟ್ಲಿಯವರಿಗೆ ಸಿಕ್ಕ ಪ್ರಶಸ್ತಿ ಇಡೀ ಸ್ನೇಹ ಬಳಗಕ್ಕೆ ಸಂದ ಗೌರವಾಗಿದೆ ಎಂದು ಹಿರಿಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರ ಹೇಳಿದರು. ನಗರದ ಸರಕಾರಿ ನೌಕರರ ಭವನದಲ್ಲಿ ನಡೆದ ಕನ್ನಡನೆಟ್ ಡಾಟ್ ಕಾಂ ಕವಿಸಮೂಹದ ೧೯೦ನೇ ಕವಿಸಮಯ ಕಾರ‍್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಕವಿಸಮೂಹ ಬಳಗದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಠ್ಠಪ್ಪ ಗೋರಂಟ್ಲಿಯವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. ಹಲವಾರು ಭಿನ್ನಾಭಿಪ್ರಾಯಗಳ ನಡುವೆಯೂ ನಾವೆಲ್ಲಾ ಒಂದಾಗಿ ಹೋರಾಟ ಮಾಡಿದ್ದೇವೆ, ಕೆಲಸ ಮಾಡಿದ್ದೇವೆ. ಮತ್ತೆ ನಮ್ಮನ್ನೆಲಾ ಒಂದು ವೇದಿಕೆಗೆ ಸೇರಿಸಿದ ಕೀರ್ತಿ ಕವಿಸಮಯಕ್ಕೆ ಸಲ್ಲುತ್ತದೆ. ಹಿಂದೆ ನಾವೆಲ್ಲಾ ಸೇರಿ

ಸಾಂಸ್ಕೃತಿಕ ಸಾಹಿತ್ಯಿಕ ವೇದಿಕೆಗಳಲ್ಲಿ ಒಂದಾಗಿ ಕೆಲಸ ಮಾಡಿದ್ದೇವೆ. ನಮ್ಮವರಿಗೆ ಸಿಕ್ಕ ರಾಜ್ಯೋತ್ಸವ ಪ್ರಶಸ್ತಿಯಿಂದೆ ನಾವೆಲ್ಲಾ ಹೆಮ್ಮೆ ಪಡುವಂತಾಗಿದೆ ಎಂದು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಶರಣಪ್ಪ ದಾನಕೈ-ದೂರವಿರು, ಅಲ್ಲಾವುದ್ದೀನ್ ಎಮ್ಮಿ-ಭರವಸೆ, ಎಸ್.ಎಂ.ಕಂಬಾಳಿಮಠ-ಕನ್ನಡ ಕಟ್ಟುವ ಕೆಲಸ, ಪುಷ್ಪಲತಾ ಏಳುಬಾವಿ-ನದಿಯ ಅಳಲು, ಅನಸೂಯಾ ಜಾಗೀರದಾರ-ಅವ್ವನ ಕನಸು, ವಿಮಲಾ ಇನಾಂದಾರ್-ಅದೃಷ್ಟ, ಅಲ್ಲಮಪ್ರಭು ಬೆಟ್ಟದೂರ-ದೇವರು, ಶ್ರೀನಿವಾಸ ಚಿತ್ರಗಾರ- ನಾಲ್ಕು ಹನಿಗಳು, ಈಶ್ವರ ಹತ್ತಿ-ಆತ್ಮಕಥನ, ವಿಜಯಲಕ್ಷ್ಮೀ ಕೊಟಗಿ- ಅವ್ವಂದಿರ ಅನಿಸಿಕೆ,ಅಂಜನಾದೇವಿ-ಶ್ರೀರಕ್ಷೆ, ಅರುಣಾ ನರೇಂದ್ರ- ನಾ ನಿನ್ನ ಕೂಡಿಕೊಂಡಿನಿ, ವಿಠ್ಠಪ್ಪ ಗೋರಂಟ್ಲಿ- ಬಣ್ಣಗಳು, ರಂಗನಾಥ-ಚುನಾವಣೆ, ಶಿವಾನಂದ- ಆಸೆ, ಸಿರಾಜ್ ಬಿಸರಳ್ಳಿ- ನಮ್ಮೂರ ಗಣೇಶಂಗೆ ಮಸೀದಿ ಎಂದರೆ ಇಷ್ಟ, ಮಂಜುನಾಥ ಚಿತ್ರಗಾರ -ಮಣ್ಣಗೊಂಬೆ ಕವಿತೆಗಳ ವಾಚನ ಮಾಡಿದರು. ವಿಠ್ಠಪ್ಪ ಗೋರಂಟ್ಲಿಯವರಿಗೆ ಇನಾಂದರ್ ದಂಪತಿಗಳು, ಎ.ಎಚ್.ಅತ್ತನೂರ ಆತ್ಮೀಯವಾಗಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಎ.ಎಂ.ಮದರಿ, ರಾಚಪ್ಪ ಮಾಸ್ತರ್, ಡಿ.ಎಂ.ಬಡಿಗೇರ, ಯಶವಂತ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ‍್ಯಕ್ರಮಕ್ಕೆ ಸ್ವಾಗತವನ್ನು ವಿಜಯಲಕ್ಷ್ಮಿಕೊಟಗಿ , ಪ್ರಾಸ್ತಾವಿಕವಾಗಿ ಸಿರಾಜ್ ಬಿಸರಳ್ಳಿ ಮಾತನಾಡಿದರೆ ಶಿವಾನಂದ ಹೊದ್ಲೂರ ವಂದನಾರ್ಪಣೆ ಮಾಡಿದರು.

Please follow and like us:
error