Breaking News
Home / Election_2018 / ಗೆಲುವಿಗೆ ಅಮಿತ್ ಷಾ ರಣತಂತ್ರ
ಗೆಲುವಿಗೆ ಅಮಿತ್ ಷಾ ರಣತಂತ್ರ

ಗೆಲುವಿಗೆ ಅಮಿತ್ ಷಾ ರಣತಂತ್ರ

ರಾಜ್ಯ ವಿಧಾನಸಭಾ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದ್ದು ಚುನಾವಣಾ ಕಣ ರಂಗೇರಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಇಂದು ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ಪಕ್ಷ ಸಂಘಟನಾ ಸಭೆ, ಸಾರ್ವಜನಿಕ ಸಭೆಗಳನ್ನು ನಡೆಸಿದರು. ಜೊತೆಗೆ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಚುನಾವಣಾ ರಣತಂತ್ರ ರೂಪಿಸಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲೆಯಲ್ಲಿ ಚುನಾವಣೆಯ ಪ್ರಚಾರ ಆರಂಭಿಸಿದೆ. ಇದರ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೊಪ್ಪಳ ಜಿಲ್ಲೆಯ ಪ್ರವಾಸ ಹಮ್ಮಿಕೊಂಡಿದ್ದರು. ಮೊದಲು ಕೊಪ್ಪಳ ನಗರದ ಶಿವಾ ಚಿತ್ರಮಂದಿರದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಂಘಟನಾ ಸಭೆಯಲ್ಲಿ ಪಾಲ್ಗೊಂಡು ಪಕ್ಷದ ಕಾರ್ಯಕರ್ತರಿಗೆ ಪಕ್ಷ ಸಂಘಟನೆ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿನ ರಣತಂತ್ರಗಳ ಕುರಿತು ಕ್ಲಾಸ್ ತೆಗೆದುಕೊಂಡರು. ಬಳಿಕ ಅಮಿತ್ ಶಾ ಕೊಪ್ಪಳದ ಆರಾಧ್ಯ ದೈವ ಶ್ರೀ ಗವಿಸಿದ್ದೇಶ್ವರ ಮಠಕ್ಕೆ ಅಮಿತ್ ಷಾ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಠದ ವಿದ್ಯಾರ್ಥಿಗಳು ಹೂಗಳನ್ನು ನೀಡಿ ಸ್ವಾಗತಿಸಿದರು. ಬಳಿಕ ಗವಿಸಿದ್ದೇಶ್ವರ ಮಠದ ಕತೃ ಗದ್ದುಗೆಯ ದರ್ಶನವನ್ನು ಪಡೆಯಲು ಅಮಿತ್ ಶಾ ಹೋದರು. ಆದ್ರೆ ಈ ವೇಳೆಯಲ್ಲಿ ಅಮಿತ್ ಶಾ ಅದೇಷ್ಟೇ ಪ್ರಯತ್ನ ಮಾಡಿದರೂ ಸಹ ಅಮಿತ್ ಶಾ ಗರ್ಭ ಗುಡಿಯ ಒಳಗಡೆ ಪ್ರವೇಶ ಮಾಡಲು ಸಾಧ್ಯವಾಗಲಿಲ್ಲ. ಆದ್ರೆ ಈ ವೇಳೆಯಲ್ಲಿ ಅಮಿತ್ ಶಾ ಅನಿವಾರ್ಯವಾಗಿ ಹೊರಗಡೆ ನಿಂತುಕೊಂಡು ಗವಿಸಿದ್ದೇಶ್ವರ ದರ್ಶನ ಪಡೆದುಕೊಂಡರು. ಇನ್ನು ಈ ವೇಳೆ ಅಮಿತ್ ಶಾ ಗವಿಸಿದ್ದೇಶ್ವರ ಸ್ವಾಮೀಜಿಗಳು ಸನ್ಮಾನ ಮಾಡಲು ಮುಂದಾದಾಗ ಶ್ರೀಗಳು ನಯವಾಗಿ ತಿರಸ್ಕರಿಸಿದರು. ಇನ್ನು ಕೊಪ್ಪಳ ಕಾರ್ಯಕ್ರಮಗಳ ಬಳಿಕ ಅಮಿತ್ ಶಾ ನೇರವಾಗಿ ನೂತನ ತಾಲೂಕ ಕುಕನೂರು ಪಟ್ಟಣಕ್ಕೆ ಆಗಮಿಸಿದರು. ಈ ವೇಳೆಯಲ್ಲಿ ಅವರು ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡರು. ಈ ವೇಳೆಯಲ್ಲಿ ಅಮಿತ್ ಶಾ ಸಬೆಯನ್ನು ಉದ್ಘಾಟಿಸಿ ಮಾತನಾಡಿದ ಅಮಿತ್ ಶಾ ಮೇ 15 ರಂದು ಮಧ್ಯಾಹ್ನ 2 ಗಂಟೆಗೆ ಕಾಂಗ್ರೆಸ್ ಸೋತು, ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದರು. ಇನ್ನು ಅಮಿತ್ ಶಾ ಜಿಲ್ಲಾ ಪ್ರವಾಸದ ವೇಳೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ ಜಿ ಸಾಥ್ ನೀಡಿದರು. ಇನ್ನು ಅಮಿತ್ ಶಾ ಕೊಪ್ಪಳ ಜಿಲ್ಲಾ ಪ್ರವಾಸದಿಂದಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಆದ್ರೆ ಈ ಪ್ರವಾಸ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಎಷ್ಟರಮಟ್ಟಿಗೆ ಸಹಕಾರಿಯಾಗಲಿದೆ ಕಾದುನೊಡಬೇಕಿದೆ.

About admin

Comments are closed.

Scroll To Top