ಗೃಹರಕ್ಷಕರು ಸಮಾಜದ ಶಾಂತಿ ಕಾಪಾಡುವ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ- ಪಿಎಸೈ ಚಿತ್ತರಂಜನ್

Kustagi .ಸರಕಾರದ ಗೌರವ ವೇತನ ಪಡೆದು ನಮ್ಮ ಇಲಾಖೆಯ ಜೋತೆ ಜೊತೆಗೆ ಬಂದೋಬಸ್ತ ಕತ೯ವ್ಯ ನಿವ೯ಹಿಸುತ್ತಿರುವದು ಹೆಮ್ಮೆಯ ಸಂಗತಿ. ಪೋಲಿಸ್ ಇಲಾಖಗೆ ಪೂರಕವಾಗಿ ಸ್ಪಂದಿಸುವ ಗೃಹ ರಕ್ಷಕ ಸಿಬ್ಬಂದಿ ಗಳಿಗೆ ಇನ್ನೂ ಹೆಚ್ಚಿನ ಕತ೯ವ್ಯಗಳನ್ನು ನೀಡುವ ಮೂಲಕ ‌ಅವರಿಗೂ ಕೂಡಾ ಭದ್ರತೆ ಒದಗಿಸಬಹುದು ಎಂದು ನೂತನ ಪಿಎಸೈ . ಚಿತ್ತರಂಜನ್ ಹೇಳಿದರು.

ಪ್ರತಿವಾರದ ಕವಾಯತು ನೆಡೆಯುವ ಸಂದರ್ಭದಲ್ಲಿ ತಾಲ್ಲೂಕು ಗೃಹ ರಕ್ಷಕದಳ ಘಟಕದ ಕಛೇರಿಗೆ ಆಗಮಿಸಿದ ನೂತನ ಪಿ.ಎಸ್.ಐ.ಚಿತ್ತರಂಜನವರು .ಗೃಹ ರಕ್ಷಕದಳದ‌ ಕವಾಯತು ‌ವಿಕ್ಷಣೆ ಮಾಡಿ ಮಾತನಾಡಿದರು.

ತಾಲ್ಲೂಕು ತಹಶಿಲ್ದಾರರ ಕಚೇರಿ ಹಾಗೂ ತಾಲ್ಲೂಕು ಆರೋಗ್ಯ ಕೇಂದ್ರಗಳಿಗೆ ಗೃಹ ರಕ್ಷಕರನ್ನು ಬಳಸಿಕೊಳ್ಳುವ ಮೂಲಕ ಭದ್ರತೆ ನೀಡಬಹುದಾಗಿದೆ.ಈ ವಿಚಾರವಾಗಿ ಸಂಬಂಧಿಸಿದ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಪ್ರಯತ್ನಿಸಲಾಗುವದು.ಗೃಹ ರಕ್ಷಕರು ಹಾಗೂ ಪೋಲಿಸ್ ಇಲಾಖೆ ಸಹೋದರ ಇಲಾಖೆಯಂತೆ ಕಾಯ೯  ನಿವ೯ಹಿಸುತ್ತಿದ್ದು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಸಮಾಜ ಸೇವೆಯಲ್ಲಿ ತೋಡಗಿಕೊಂಡಿದ್ದಾರ.ಎಂದು ಪಿ.ಎಸ್.ಐ.ಚಿತ್ತರಂಜನ್ ಅವರು ಹೇಳಿದರು. ಆರಂಭದಲ್ಲಿ ನೂತನ ಪಿ.ಎಸ್.ಐ.ಅವರನ್ನು ತಾಲ್ಲೂಕು ಗೃಹ ರಕ್ಷಕದಳ ಘಟಕದಿಂದ ಗೌರವ ಸನ್ಮಾನ ಮಾಡಿ ಅಭಿನಂದಿಸಲಾಯಿತು.ಸೀನಿಯರ್ ಪ್ಲಟೂನ ಕಮಾಂಡರ್ ರವಿಂದ್ರ ಬಾಕಳೆ ಪ್ರಾಸ್ತಾವಿಕ ವಾಗಿ ಮಾತನಾಡಿ ಗೃಹ ರಕ್ಷಕರ ಸಂಖ್ಯೆಗೆ ಅನುಗುಣವಾಗಿ ಇನ್ನೂ ಹೆಚ್ಚಿನ ಕತ೯ವ್ಯಗಳು ಸೀಗಬೇಕು .ತಾಲೂಕಿನಲ್ಲಿ ಸುಮಾರು ನೂರು ಜನ ಗೃಹ ರಕ್ಷಕರಿದ್ದು ಬೆರಳೆಣಿಕೆಯಷ್ಟು ಮಾತ್ರ ಸಿಬ್ಬಂದಿ ಗೆ ಕೆಲಸ ಸಿಗುತ್ತಿದೆ ಎಲ್ಲರಿಗೂ ಕೆಲಸ ಸಿಗುವಂತಾಗ ಬೇಕು.ಆ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಹೆಚ್ಚು ಗೃಹ ರಕ್ಷಕರಿಗೆ  ಬಳಸಿ ಕೊಳ್ಳಲಿ ಎಂದು ಹೇಳಿದರು.ಸ್ವಾಗತವನ್ನು ಘಟಕಾಧಿಕಾರಿ ನಾಗರಾಜ ಬಡಿಗೇರ ಮಾಡಿದರೆ‌ ವಂದನಾಪ೯ಣೆಯನ್ನು ಶಿವಪ್ಪ ಚೂರಿ ವಂದಿಸಿದರು.

Please follow and like us:
error