ಗೂಂಡಾಗಿರಿ ಮಾಡಿ ರಾಜಕೀಯ ಮಾಡಲು ಬೇರೆಯವರಿಗೂ ಬರುತ್ತೆ – ಇಕ್ಬಾಲ್ ಅನ್ಸಾರಿ

ಕನ್ನಡನೆಟ್ ನ್ಯೂಜ್ ಗಂಗಾವತಿ ; ಕಾಂಗ್ರೆಸ್ ನಿಂದ ಆಯ್ಕೆಯಾದ ನಗರಸಭೆ ಸದಸ್ಯನನ್ನು ಕಿಡ್ನಾಪ್ ಮಾಡಲಾಗಿದೆ. ನಗರಸಭೆ ಸದಸ್ಯ ಮನೋಹರ ಸ್ವಾಮಿಯನ್ನು ಮುಂಬೈನಿಂದ ರೌಡಿಗಳನ್ನು ಕರೆಯಿಸಿ ಎತ್ತಿಹಾಕಿಕೊಂಡು ಹೋಗಿದ್ದಾರೆ ಸದಸ್ಯನಿಗೆ ಕಾಲಿನಿಂದ ಎದೆಗೆ ಒದ್ದು ಗೂಂಡಾಗಿರಿ ಮಾಡಿ ಎತ್ತಿಹಾಕಿಕೊಂಡು ಹೋಗಿದ್ದಾರೆ ಮುಖಕ್ಕೆ ಸ್ಪ್ರೇ ಮಾಡಿ, ಕೈ ಕಟ್ಟಿಕೊಂಡು ಎತ್ತಿಹಾಕಿಕೊಂಡು ಹೋಗಿದ್ದಾರೆ ,ಎದೆಗೆ ಒದ್ದಿದ್ದಾರೆ ಮನೋಹರ ಸ್ವಾಮಿ ರಿಸಸ್ ಬಂದಿದೆ ಅಂತಾ ಕಾರ್ ನಿಂದ ಇಳಿದು ಓಡಿದ್ದಾರೆ ಆಗ ಪಟ್ರೋಲಿಂಗ್ ಪೊಲೀಸರು ಆತನಿಗೆ ರಕ್ಷಣೆ ನೀಡಿದ್ದಾರೆ ಇಲ್ಲದಿದ್ದರೆ ಆತನನ್ನು ಮುಂಬೈಗೆ ಕರೆದೊಯ್ದು ಕೊಲೆ ಮಾಡುತ್ತಿದ್ದರು ಇದು ಬಿಜೆಪಿಯ ಸಂಸ್ಕೃತಿ,‌ ಇಡೀ‌ ದೇಶದಲ್ಲಿ ಬಿಜೆಪಿ ಇದನ್ನೇ ಮಾಡ್ತಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಗಾವತಿಯ ತಮ್ಮ ಗೃಹಕಚೇರಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಜಂಟಿ ಸುದ್ದಿಗೋಷ್ಠಿ ಅವರು ಮಾತನಾಡುತ್ತಿದ್ದರು.

ಕಿಡ್ನಾಪ್ ಮಾಡುವಂಥ  ಹೊಸ ಸಂಪ್ರದಾಯಕ್ಕೆ ಬಿಜೆಪಿ, ಶಾಸಕ ಪರಣ್ಣ ಮುನವಳ್ಳಿ ‌ನಾಂದಿ ಹಾಡಿದ್ದಾರೆ. ಗೂಂಡಾಗಿರಿ ಮಾಡಿ ರಾಜಕೀಯ ಮಾಡಲೂ ಬೇರೆಯವರಿಗೂ ಬರುತ್ತೆ ಪರಣ್ಣ ಎಂದ ಅನ್ಸಾರಿ ಶಾಸಕ ಪರಣ್ಣ ಮುನವಳ್ಳಿಗೆ ನಗರಸಭೆ ಅಧಿಕಾರ ಹಿಡಿಯುವ ತೆವಲು ಹೆಚ್ಚಾಗಿದೆ. ಜನಾದೇಶ ಇಲ್ಲ ಎಂದರೂ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ ಬಿಜೆಪಿ ಸದಸ್ಯೆ ಒಬ್ಬರು ನಮ್ಮ ಕಡೆ ಬಂದಿದ್ದಾರೆ ಸ್ವಯಂ ಪ್ರೇರಿತವಾಗಿ ಬಂದಿದ್ದಾರೆ ಪರಣ್ಣ ಅಪ್ಪಟ ಸುಳ್ಳು ಶಾಸಕ ಇವರು ಅಧಿಕಾರದಲ್ಲಿ ಇದ್ದಾಗೆಲ್ಲ  ಬರೀ ರೌಡಿಸಂ ಮಾಡಿದ್ದಾರೆ ಪರಣ್ಣ ಮುನವಳ್ಳಿ ಸಂಸ್ಕೃತಿಯೇ ರೌಡಿ ಸಂಸ್ಕೃತಿ ಗಂಗಾವತಿಯ ಎಲ್ಲ ಕೋಮು ಗಲಭೆಗೆ ಪರಣ್ಣನ ಕುಮ್ಮಕ್ಕು ಕಾರಣ ಎಂದು ಆರೋಪ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಸದಸ್ಯ ಅಮರೇಶ ಗೋನಾಳ, ಶಾಮೀದ್ ಮನಿಯಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Please follow and like us:
error