ಗುಳದಳ್ಳಿ ಗ್ರಾಮದಲ್ಲಿಕೆ.ಹೆಚ್.ಪಿ.ಟಿ ಸ್ಪೂರ್ತಿಯೋಜನೆಯಿಂದ ಹೆಣ್ಣು ಮಕ್ಕಳಿಗಾಗಿ ಕ್ರೀಡಾಕೂಟ

Koppal Sports News ವಿಶ್ವ ಹೆಣ್ಣುಮಕ್ಕಳದಿನದಅಂಗವಾಗಿ ಕೆ.ಹೆಚ್.ಪಿ.ಟಿ ಸ್ಪೂರ್ತಿಯೋಜನೆಯಿಂದ ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿಹೆಣ್ಣು ಮಕ್ಕಳಿಗಾಗಿ ಕಬಡ್ಡಿ ಹಾಗೂ ವಾಲಿಬಾಲ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ತಾಲೂಕಿನ ಗುಳದಳ್ಳಿ, ಗಿಣಿಗೇರಾ, ಕರ್ಕಿಹಳ್ಳಿ, ಹೊಸಕನಕಾಪುರ, ಬೇವಿನಹಳ್ಳಿ ಹಾಗೂ ಬಸಾಪುರಗ್ರಾಮಗಳ ಸುಮಾರು ೧೨೦ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಗುಳದಳ್ಳಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಶರಣಮ್ಮರವರು ವೇದಿಕೆ ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸ್ಪೂರ್ತಿಯೋಜನೆಯ ಜಿಲ್ಲಾಸಂಯೋಜಕರಾದ ರಾಜಕುಮಾರ ಕಾತರಕಿ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಹೆಣ್ಣು ಮಕ್ಕಳು ಕೇವಲ ಅಡುಗೆ ಮನೆಗೆ ಸೀಮಿತರಾಗದೇ ಕ್ರೀಡೆಗಳಲ್ಲಿ ಭಾಗವಹಿಸುವಂತಾಗಬೇಕು.ಪಾಲಕರುತಮ್ಮ ಹೆಣ್ಣು ಮಕ್ಕಳಿಗೆ ಗಂಡು ಹೆಣ್ಣು ಎಂಬ ಭೇದಭಾವ ಮಾಡದೇ ಹೆಣ್ಣು ಮಕ್ಕಳು ಕೂಡಾಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕೆಂದು ಹೇಳಿದರು.ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ರತ್ನಮ್ಮ, ಗುಳದಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ   ಭೀಮಪ್ಪ ಹೂಗಾರ ಗುರುಗಳು, ಸ್ಪೂರ್ತಿಯೋಜನೆಯಕ್ಷೇತ್ರ ಅಧಿಕಾರಿಗಳಾದ ಶ್ರೀಮತಿ ಅಕ್ಕಮಹಾದೇವಿ,  ಮಲ್ಲಪ್ಪ, ಗ್ರಾಮದ ಹಿರಿಯರು, ಹಾಗೂ ಯುವಕರುಉದ್ಘಾಟನಾಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಕ್ಕಳಿಗೆ ಯಶಸ್ವಿಯಾಗಲೆಂದು ಹಾರೈಸಿದರು. ಸ್ಪೂರ್ತಿ ಗುಂಪಿನ ಹೆಣ್ಣುಮಕ್ಕಳಾದ ಕು.ನಿಂಗಮ್ಮ ನಿರೂಪಣೆ ಮಾಡಿದರು ಹಾಗೂ ಕು.ತಾಯವ್ವ ಅತಿಥಿಗಳನ್ನು ಸ್ವಾಗತಿಸಿದರು.

Please follow and like us:
error