You are here
Home > Koppal News > ಗುಳದಳ್ಳಿಯಲ್ಲಿ 28 ರಂದು ಸಾಮೂಹಿಕ ವಿವಾಹ

ಗುಳದಳ್ಳಿಯಲ್ಲಿ 28 ರಂದು ಸಾಮೂಹಿಕ ವಿವಾಹ

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರವರ 127ನೇ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ,ಗುಳದಳ್ಳಿ, ಸಮರ್ಪಣಾ ಗ್ರಾಮೀಣಾಭಿವೃದ್ಧಿ ಮತ್ತು ಶಿಕ್ಷಣ ಸಂಸ್ಥೆ,ಕೊಪ್ಪಳ ಮತ್ತು ದಲಿತ ಸಂಘರ್ಷ ಸಮಿತಿಯ ಆಶ್ರಯದಲ್ಲಿ ದಿನಾಂಕ:28/04/2018ರಂದು ಕೊಪ್ಪಳ ತಾಲೂಕಿನ ಗುಳದಳ್ಳಿ ಗ್ರಾಮದಲ್ಲಿ 51 ಜೋಡಿಗಳ ಸರಳ ಸಾಮೂಹಿಕ ವಿವಾಹ ಜರುಗಲಿವೆ. ವಿವಾಹ ವಾಗಲು ಬಯಸುವವರು ದಿನಾಂಕ: 10/04/2018ರ ಒಳಗಾಗಿ ವಧು-ವರನ ವಯಸ್ಸಿನ ಧೃಢಿಕರಣ ಪತ್ರ, ವಾಸಸ್ಥಳ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ,ಮತದಾರರ ಗುರುತಿನ ಚೀಟಿ, ಆಧಾರ ಕಾರ್ಡ ,ಭಾವಚಿತ್ರದೊಂದಿಗೆ ಗುಳದಳ್ಳಿಯ ಡಾ.ಬಿ.ಆರ್.ಅಂಬೇಡ್ಕರ ಯುವಕ ಸಂಘದಲ್ಲಿ ಅಥವಾ ಕೊಪ್ಪಳದ ವಿಜ್ಡಮ್ ಕೋಚಿಂಗ್ ಸೆಂಟರ್ ನಲ್ಲಿ ಹೆಸರನ್ನು ನೋಂದಾಯಿಸಬೇಕು.ಕಳೆದ ವರ್ಷ ವಿವಾಹದ 38 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜೋಡಿಗಳಿಗೆ ಪ್ರತಿ ಜೋಡಿಗೆ ರೂ 50,000/ ದಂತೆ, ಒಟ್ಟು 19ಲಕ್ಷ ರೂಪಾಯಿಗಳನ್ನು ಸಮಾಜಕಲ್ಯಾಣ ಇಲಾಖೆಯಿಂದ ಆರ್ಥಿಕ ಧನ ಸಹಾಯವನ್ನು ಕೊಡಿಸಲಾಗಿದೆ.ಮೊದಲು ನೊಂದಾಯಿಸಿದ ಜೋಡಿಗಳಿಗೆ ಆದ್ಯತೆ ನೀಡಲಾಗುವದು.

ಹೆಚ್ಚಿನ ಮಾಹಿತಿಗಾಗಿ ಗುಡದಪ್ಪ ದೊಡ್ಮನಿ (ಮೊ.9611859565) ಯಮನೂರಪ್ಪ ಗೊರವರ್ (ಮೊ:9620520507) ಅವರನ್ನು ಸಂಪರ್ಕಿಸಬಹುದು ಎಂದು ಸಮರ್ಪಣಾ ಶಿಕ್ಷಣ & ಗ್ರಾಮೀಣಾಭಿವೃದ್ದಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗಾಳೆಪ್ಪ ದೊಡ್ಮನಿ (ಮೊ: 9611859500)ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Top