ಗುರುಸ್ಮರಣೋತ್ಸವದ ನಿಮಿತ್ಯ ಪಾದಯಾತ್ರೆ


ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ಇಂದು ದಿನಾಂಕ ೧೧-೦೩-೨೦೧೮ ರಂದು ರವಿವಾರ ಶ್ರೀ ಮ.ನಿ.ಪ್ರ.ಜ.ಲಿಂ. ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಪ್ರತಿ ವರ್ಷದ ಪದ್ಧತಿಯಂತೆ ಈ ಸಾರೆಯೂ ಬೆಳಿಗ್ಗೆ ೬ ಗಂಟೆಗೆ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಳೆಮಲ್ಲೇಶ್ವರ ದೇವಸ್ಥಾದಿಂದ ಹೊರಟು ಬನ್ನಿಕಟ್ಟಿ, ಬಸ್ ನಿಲ್ದಾಣ, ಅಶೋಕ ಸರ್ಕಲ್, ಜವಾಹರ್ ರಸ್ತೆ, ಗಡಿಯಾರಕಂಭ ಹಾಗೂ ಶಾರದಾ ಚಿತ್ರ ಮಂದಿರ ಮಾರ್ಗವಾಗಿ ಶ್ರೀಗವಿಮಠದವರೆಗೆ ಪಾದಯಾತ್ರೆ ನಡೆಯಿತು.ಶ್ರೀ ಷ.ಬ್ರ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ಹೆಬ್ಬಾಳ, ಶ್ರೀ ಹಿರಿಶಾಂತವೀರ ಸ್ವಾಮಿಗಳು ಹೂವಿನ ಹಡಗಲಿ.ಮೈನಳ್ಳಿ ಶ್ರೀಗಳು, ಭಾಗವಹಿಸಿದ್ದರು. ಬಳಗಾನೂರಿನ ಶ್ರೀ ಶಿವಶಾಂತವೀರ ಶರಣರು ಮಾರ್ಗದುದ್ದಕ್ಕೂ ಭಕ್ತಿಗೀತೆಗಳನ್ನು ಹಾಡುತ್ತಾ ಜನರನ್ನು ಭಕ್ತಿ ಪಥಕ್ಕೆ ಆಕರ್ಷಿಸುತ್ತಿದ್ದರು. ನಗರ ಹಾಗೂ ಸುತ್ತಮುತ್ತಲಿನ ಭಕ್ತಾಧಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಉಚಿತ ಶ್ರವಣಯಂತ್ರ ವಿತರಣೆ, ಹೃದಯರೋಗ ತಪಾಸಣೆ ಮತ್ತು ಸಲಹೆ, ಬಂಜೆತನ ಹಾಗೂಚರ್ಮರೋಗದ ಉಚಿತ ತಪಾಸಣೆ ಚಿಕಿತ್ಸಾ ಶಿಬಿರದ – ಯಶಸ್ವಿ
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲಿ ಲಿ೦. ಶ್ರೀ ಶಿವಶಾ೦ತವೀರ ಮಹಾಶಿವಯೋಗಿಗಳ ಪುಣ್ಯಾರಾಧನೆಯ ನಿಮಿತ್ತ ಇಂದು ಬೆಳಗ್ಗೆ ೧೦ ಗಂಟೆಯಿಂದ ಸಾಯಂಕಾಲ ೪ ಗಂಟೆಯವರೆಗೆ ಹಮ್ಮಿಕೂಳ್ಳಲಾದ ಉಚಿತ ಚಿಕಿತ್ಸಾ ಶಿಬಿರದಲ್ಲಿ ಬೆಂಗಳೂರಿನ ಸಾಗರ್ ಆಸ್ಪತ್ರೆಯ ಹೃದಯರೋಗ ತಜ್ನವೈದ್ಯರಾದ ಡಾ.ಕುಮಾರ ಹಾಗೂ ಸಿಬ್ಬಂದಿಯವರು ಸುಮಾರು ೧೩೦ ಜನ ರೋಗಿಗಳ ಹೃದಯರೋಗದ ತಪಾಸಣೆ ಮಾಡಿ ಸಲಹೆ ನೀಡಿದರು. ಹಾಗೂ ಮಹಾವಿದ್ಯಾಲಯದ ತಜ್ನ ವೈದ್ಯರಿಂದ ಈ ಶಿಬಿರದಲ್ಲಿ ಸುಮಾರು ೬೬ ಬಂಜೆತನ ರೋಗಿಗಳು, ೧೫೬ ಚರ್ಮರೋಗಿಗಳು, ೧೮೫ ಇತರೆ ರೋಗಿಗಳಿಗೆ ಉಚಿತವಾಗಿ ವಿಶೇಷ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಯಿತು. ಶ್ರವಣದೋಷವುಳ್ಳ ೭೭ ಜನರಿಗೆ ಶ್ರವಣಯಂತ್ರವನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಪ್ರಾಚಾರ್ಯರಾದ ಡಾ. ಬಿ. ಎಸ್. ಸವಡಿ, ಡಾ. ಕೆ. ಬಿ. ಹಿರೇಮಠ, ಶಿಬಿರದ ಸಂಚಾಲಕರಾದ ಡಾ. ಸುರೇಶ ಹಕ್ಕಂಡಿ, ಡಾ. ಸಿ. ಎಸ್.ಕರಮುಡಿ, ಡಾ.ಮಂಜುನಾಥ ಅಕ್ಕಿ, ಡಾ.ಗುರುರಾಜ, ಡಾ.ಪ್ರಭು ಹಾಗೂ ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕ ಸಿಬ್ಬಂದಿ ಉಪಸ್ಥಿತರಿದ್ದರು.

Please follow and like us:
error

Related posts