ಗುಡ್ ಮಾರ್ನಿಂಗ್ ಸರ್ ಎಂದು ಬರೆದು ಹೋದ ಕಳ್ಳರು

koppal-shop-theift-police

ಕೊಪ್ಪಳದಲ್ಲಿ ಮತ್ತೆ ಇಂದು ಕಳ್ಳತನವಾಗಿದೆ.  ಕೊಪ್ಪಳದ ವಿದ್ಯಾನಗರದ ವಾಲ್ಮೀಕಿ ಭವನದ ಪಕ್ಕದಲ್ಲಿರುವ , ಜ್ಞಾನಸಾಗರ ಕೋಚಿಂಗ್ ಸೆಂಟರ್ ಮತ್ತು ಅದರ ಪಕ್ಕದಲ್ಲೆ ಇರುವ ಅಂಗಡಿಗಳ ಕಳ್ಳತನ ನಿನ್ನೆ ತಡರಾತ್ರಿ ಮಾಡಲಾಗಿದೆ. ಅಂಗಡಿಯಲ್ಲಿದ್ದ ೩ ಕಂಪ್ಯೂಟರ್ ಸೇರಿದಂತೆ ಸ್ಟೇಶನರಿ ಸಾಮಗ್ರಿಗಳನ್ನು ಕಳ್ಳರು ದೋಚಿದ್ದಾರೆ. ಈ ಅಂಗಡಿಯ ಪಕ್ಕದಲ್ಲೇ ಇರುವ ಗ್ಯಾರೇಜ್ ಒಂದರ ಕೀಯನ್ನು ಕೂಡಾ ಮುರಿದು ಹಾಕಿದ್ದಾರೆ.  ಕೋಚಿಂಗ್ ಸೆಂಟರ್ ನ ಬೋರ್ಡ್ ಮೇಲೆ ಗುಡ್ ಮಾರ್ನಿಂಗ್ ಸರ್ ಎಂದು ಬರೆದು ಹೋಗಿದ್ದಾರೆ

. ಇದರು ಸ್ಥಳೀಕರೇ ಮಾಡಿರಬಹುದು ಎನ್ನುವ ಅನುಮಾನವಿದೆ. ಎರಡು ದಿನಗಳ ಹಿಂದೆಯಷ್ಟೇ ಎಟಿಎಮ್ ಅನ್ನು ಕೂಡಾ ಕಳ್ಳತನ ಮಾಡಲಾಗಿತ್ತು. ನಿರಂತವಾಗಿ ಕೊಪ್ಪಳದಲ್ಲಿ ಈ ರೀತಿಯ ಕಳ್ಳತನಗಳು ನಡೆದರೂ ಸಹ  ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಇದರು ಕಳ್ಳರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ ಎಂದು ಸಾರ್ವಜನಿಕರು ದೂರಿದ್ದಾರೆ.    ಸದ್ಯ ಸ್ಥಳಕ್ಕೆ ಕೊಪ್ಪಳ ನಗರ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Please follow and like us:
error