ಗುಡಿಸಲು ಮುಕ್ತ ಕರ್ನಾಟಕ ಕಾಂಗೇಸ ಸರ್ಕಾರದ ಗುರಿ-ಶಾಸಕ ಕೆ.ರಾಘವೇಂದ್ರ

ಕೊಪ್ಪಳ: ೨೭ ಕೊಪ್ಪಳ ಜಿಲ್ಲಾ ಪಂಚಾಯತ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ರೂ. ೨ ಕೋಟಿ ೨೫ ಲಕ್ಷದ ತಾಲೂಕ ಪಂಚಾಯತ ಆವರಣದಲ್ಲಿ ವಸತಿ ನಿರ್ಮಾಣ ಕಾಮಗಾರಿ ಹಾಗೂ ಕರ್ನಾಟಕ ಕೊಳಗೇರಿ ನಿವಾಸಿಗಳ ಯೋಜನೆ ಅಡಿಯಲ್ಲಿ ಸರ್ವರಿಗೂ ಸುರು(ಮನೆ) ರೂ. ೧೫ ಕೋಟಿ ೭೫ ಲಕ್ಷ ವೆಚ್ಚದ ೩೭೫ ಮನೆಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಬಳಿಕ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ನುಡಿದಂತೆ ನಡೆದಿರುವ ನಮ್ಮ ಸರ್ಕಾರವು ಜನರ ಆಶೋತ್ತರಗಳನ್ನು ಹಂತ ಹಂತವಾಗಿ ಈಡೇರಿಸುತ್ತಿದೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ರಾಜ್ಯದ ಜನತೆಗೆ ೧೫ ಲಕ್ಷ ಮನೆಗಳ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದು ಅದರ ಅನುಗುಣವಾಗಿ ಕಾರ್ಯ ಪ್ರಾರಂಭಗೊಂಡಿವೆ. 

ಅನ್ನಭಾಗ್ಯದಿಂದ ಹಸಿವು ಮುಕ್ತ ಕರ್ನಾಟಕ ಮಾಡಿರುವ ನಮ್ಮ ಸರ್ಕಾರವು ರಾಜ್ಯದ ಜನತೆಗೆ ಮನೆಗಳ ನಿರ್ಮಾಣ ಮಾಡಿ ಗುಡಿಸಲು ಮುಕ್ತ ಕರ್ನಾಟಕ ಮಾಡುವುದು ಖಚಿತ ಇದೇ ೩೦ರಂದು ನಗರದ ಮುಖ್ಯ ರಸ್ತೆಯಾದ ಬಸವೇಶ್ವರ ವೃತ್ತದಿಂದ ಗಡಿಯಾರಕಂಬದ ಮಾರ್ಗದಿಂದ ಸಿಂದೋಗಿ ರಸ್ತೆಯ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಲಾಗುವುದು ಚುನಾವಣಾ ಪೂರ್ವದಲ್ಲಿ ನಾನು ಕ್ಷೇತ್ರದ ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಿದ್ದೇನೆ.  ಕ್ಷೇತ್ರದ ಜನತೆ ಬರುವ ಚುನಾವಣೆಯಲ್ಲಿ ಅಭಿವೃದ್ಧಿಯ ಕಾರ್ಯಗಳನ್ನು ನೋಡಿ ಕಾಂಗ್ರೇಸ ಪಕ್ಷದ ಅಭ್ಯರ್ಥಿಯಾದ ನನ್ನನ್ನು ಮತ್ತೆ ಬೆಂಬಲಿಸಲಿದ್ದಾರೆ, ಈಗಾಗಲೇ ಚುನಾವಣೆ ಸಮಿಕ್ಷೆ ಬಹಿರಂಗಗೊಂಡಿದ್ದು ರಾಜ್ಯದಲ್ಲಿ ಕಾಂಗ್ರೇಸ ಪಕ್ಷವು ಜಯಬೇರಿಗೊಳ್ಳಲಿದೆ ಎಂದು ಹೇಳಿದರು.  ಈ ಸಂದರ್ಭದಲ್ಲಿ ಜಿ.ಪಂ.ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ನಗರಸಭಾ ಅಧ್ಯಕ್ಷ ಮಹೇಂದ್ರ ಚೊಪ್ರಾ, ತಾ.ಪಂ.ಅಧ್ಯಕ್ಷ ಭಾಲಚಂದ್ರನ, ಎ.ಪಿ.ಎಂ.ಸಿ ಅಧ್ಯಕ್ಷ ಹನುಮರಡ್ಡಿ ಹಂಗನಕಟ್ಟಿ, ಗ್ರಾ.ಪಂ.ಅಧ್ಯಕ್ಷ ಯಮನೂರಪ್ಪ ನಾಯಕ, ನಗರಸಭಾ ಸದಸ್ಯರುಗಳಾದ ಅಮ್ಜದ ಪಟೇಲ್, ಸಲೀಂ ಸಾಬ, ಶರಣಪ್ಪ ಚಂದನಕಟ್ಟಿ, ಮಲ್ಲಪ್ಪ ಕವಲೂರ, ಸರಿತಾ ಸುಧಾಕರ, ಖಾಜಾವಲಿ ಬನ್ನಿಕೊಪ್ಪ, ಮುಖಂಡರುಗಳಾದ ಭಾಷುಸಾಬ ಕತೀಬ್, ಇಬ್ರಾಹಿಂ ಅಡ್ಡೆವಾಲೆ, ಗುರುರಾಜ ಹಲಗೇರಿ, ಕುರುಗೋಡ ರವಿ, ಮಾನ್ವಿ ಪಾಷಾ, ಗವಿಸ್ವಾಮಿ, ಹುಸೇನ ಪೀರ, ಅಶೋಕ ಕಂಬಳಿ, ಅರುಣ ಶೆಟ್ಟಿ, ಜಾಫರ ತಟ್ಟಿ, ಚನ್ನಮ್ಮ, ಸಲ್ಲಾವುದ್ದಿನ ಸಿದ್ದಿಕಿ, ಮುನೀರ ಕೊತ್ವಾಲ, ಉಮಾಜನಾದ್ರಿ, ಶೀತಲ ಪಾಟೀಲ, ನಿಂಗಪ್ಪ, ವಕ್ತಾರ ಅಕ್ಬರ ಪಾಷಾ ಪಲ್ಟನ ಉಪಸ್ಥಿತರಿದ್ದರು.