ಗಿಣಿಗೇರಾದಲ್ಲಿ ಹಂಪಿ ಎಕ್ಸ್‍ಪ್ರೆಸ್ ರೈಲು ನಿಲುಗಡೆ

 ಕೊಪ್ಪಳ ತಾಲೂಕಿನ ಗಿಣಿಗೇರಾದಲ್ಲಿ ಹಂಪಿ ಎಕ್ಸ್‍ಪ್ರೆಸ್ ರೈಲು 2017 ರ ಜ.1 ರಿಂದ ನಿಲುಗಡೆಯಾಗಲಿದೆ.

  ಗಿಣಿಗೇರಾ ಗ್ರಾಮವು ಕೈಗಾರಿಕಾ ವಲಯದ ಪ್ರದೇಶವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ವಿವಿಧ ನಗರಗಳಿಗೆ ಪ್ರಯಾಣ ಬೆಳೆಸುತ್ತಾರೆ.  ಆದ್ದರಿಂದ ಗಿಣಿಗೇರಾ ರೈಲು ನಿಲ್ದಾಣದಲ್ಲಿ ಹಂಪಿ ಎಕ್ಸ್‍ಪ್ರೆಸ್ ರೈಲನ್ನು ನಿಲುಗಡೆ ಮಾಡುವಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಕೇಂದ್ರ ರೈಲ್ವೆ ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.  ಇದೀಗ ಅವರ ಮನವಿಗೆ ಸ್ಪಂದನೆ ದೊರೆತಿದ್ದು,   ಜ.1 ರಿಂದ ಹಂಪಿ ಎಕ್ಸ್‍ಪ್ರೆಸ್ ಗಾಡಿ ಸಂಖ್ಯೆ:16591/16592 ಗಿಣಿಗೇರಾದಲ್ಲಿ ನಿಲುಗಡೆಯಾಗಲಿದೆ.  ಈ ಕುರಿತು ರೈಲ್ವೆ ಇಲಾಖೆ ಉನ್ನತ ಅಧಿಕಾರಿಗಳು ಸಂಸದರಿಗೆ ಪತ್ರದ ಮೂಲಕ ತಿಳಿಸಿದ್ದು, ಗಿಣಿಗೇರಾದಲ್ಲಿ ರೈಲು ನಿಲುಗಡೆಗೆ ಸಹಕರಿಸಿದ ರೈಲ್ವೆ ಮಂತ್ರಿಗಳಿಗೆ ಹಾಗೂ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಂಸದ ಕರಡಿ ಸಂಗಣ್ಣ ಅವರು ಅಭಿನಂದನೆ ಸಲ್ಲಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply