ಗಾಣಿಗ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ : ಜು.೨೭, ನಗರದ ಜಿಲ್ಲಾ ಗಾಣಿಗ ಸಮುದಾಯ ಭವನದಲ್ಲಿ ಕೊಪ್ಪಳ ತಾಲೂಕ ಗಾಣಿಗ ಸಂಘದ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಡಾ|| ಪಿ.ಎಮ್. ಬಸವರಾಜ ಅಧ್ಯಕ್ಷತೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ಮಂಜುನಾಥ ಪಾಟೀಲ ಹಂದ್ರಾಳ, ಕಾರ್ಯಾಧ್ಯಕ್ಷರಾಗಿ ಸಂಗನಗೌಡ ಪೊಲೀಸ್ ಪಾಟೀಲ, ಉಪಾಧ್ಯಕ್ಷರುಗಳಾಗಿ ಬಸವರಾಜ ಸಜ್ಜನ, ದೊಡ್ಡಪ್ಪ ಯಡ್ಡೊಣಿ, ಪಾಲಾಕ್ಷಿ ಗುಂಗಾಡಿ, ಈಶಪ್ಪ ಕುದರಿಮೋತಿ, ಪ್ರಧಾನ ಕಾರ್ಯದರ್ಶಿಯಾಗಿ ಚನ್ನಬಸವ ಗಾಳಿ, ಖಜಾಂಚಿಯಾಗಿ ಹನುಮಗೌಡ ಬುಡ್ಡನಗೌಡ ಇವರುಗಳನ್ನು ಆಯ್ಕೆಮಾಡಲಾಗಿದೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ರುದ್ರುಮುನಿ ಗಾಳಿ, ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರ, ವೀರಣ್ಣ ಗಾಣಿಗೇರ, ಶರಣಪ್ಪ ಸಜ್ಜನ, ಡಾ|| ಬಸವರಾಜ ಸಜ್ಜನ, ಸಂಗನಗೌಡ ಪಾಟೀಲ ಹಾಗೂ ಗಾಣಿಗ ಸಮಾಜದ ಹಿರಿಯರು ಮುಖಂಡರು ಪಾಲ್ಗೊಂಡಿದ್ದರು.

Please follow and like us:
error