ಗಾಂಧೀಜಿ-150 ಜನ್ಮ ವರ್ಷಾಚರಣೆ ; ಛಾಯಚಿತ್ರ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ 

ಕೊಪ್ಪಳ  : ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೊಪ್ಪಳದ ಕೆ.ಎಸ್.ಆರ್.ಟಿ.ಸಿ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ಇಂದಿನಿಂದ (ಅ.10 ರಿಂದ 12 ರವರೆಗೆ) ಏರ್ಪಡಿಸಲಾದ ಗಾಧೀಜಿವರ ಜೀವನ ಕುರಿತಾದ ಛಾಯಚಿತ್ರ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಅವರು ರಿಬ್ಬನ್ ಕತ್ತರಿಸುವುದರ ಮೂಲಕ ಗುರುವಾರದಂದು ಚಾಲನೆ ನೀಡಿದರು. 

ಗಾಧೀಜಿವರ ಜೀವನ ಕುರಿತ ಛಾಯಚಿತ್ರ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದ ಅಪರ ಜಿಲ್ಲಾಧಿಕಾರಿ ಮಾರುತಿ ಅವರು ಮಾತನಾಡಿ, ರಾಷ್ಟçಪಿತ ಮಹಾತ್ಮ ಗಾಂಧೀಜಿಯವರ ಜೀವನದ ಬಗ್ಗೆ ಎಲ್ಲಾ ಸಾರ್ವಜನಿಕರಿಗೆ ತಿಳಿಸುವ ನಿಟ್ಟಿನಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಆಯೋಜಿಸಲಾದ  ಈ ಪ್ರದರ್ಶನವು ಒಂದು ವಿಶೇಷವಾದ ಕಾರ್ಯಕ್ರಮವಾಗಿದೆ.  ಬಾಪೂ ಅವರ ಜೀವನದ ಬಗ್ಗೆ ತಿಳಿಸುವ ಈ ಪ್ರದರ್ಶನವನ್ನು ಎಲ್ಲಾ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ವೀಕ್ಷಿಸುವಂತೆ ತಿಳಿಸಿದರು. 
ವಾರ್ತಾ ಇಲಾಖೆಯ ಎಂ. ಅವಿನಾಶ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.   
ಛಾಯಚಿತ್ರ ಹಾಗೂ ವಸ್ತು ಪ್ರದರ್ಶನದಲ್ಲಿ ಗಾಂಧೀಜಿಯವ ಬಾಲ್ಯ, ಜೀವನ, ಹೋರಾಟ, ಸತ್ಯಾಗ್ರಹ, ಚಳುವಳಿಗಳು ಸೇರಿದಂತೆ ಅವರ ಸಂಪೂರ್ಣ ಜೀವನದ ವಿವರವನ್ನು ಬಿತ್ತರಿಸಲಾಗಿದೆ.  ಅಲ್ಲದೇ ಗಾಧೀಜಿಯವರ ಪುತ್ಥಳಿ ಇರುವುದು ವಿಶೇಷವಾಗಿದೆ.  ಈ ಛಾಯಚಿತ್ರ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮವು ಇಂದಿನಿಂದ ಅಂದರೆ ಅಕ್ಟೊÃಬರ್. 10 ರಿಂದ 12 ರವರೆಗೆ ನಡೆಯಲಿದ್ದು, ಕೊಪ್ಪಳ ಜಿಲ್ಲೆಯ ಎಲ್ಲಾ ಸಾರ್ವಜನಿಕರು ಕೇಂದ್ರಿಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ, ಇಲ್ಲಿರುವ “ಗಾಂಧೀಜಿ ಜೀವನ ಛಾಯಚಿತ್ರ ಹಾಗೂ ವಸ್ತು ಪ್ರದರ್ಶನ”ವನ್ನು ವೀಕ್ಷಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೊಪ್ಪಳ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಾದ ಜಿ. ಸುರೇಶ್ ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.   

Please follow and like us:
error