ಗಾಂಧೀಜಿಯವರ ಹೆಜ್ಜೆಯ ಗುರುತು ಪ್ರತಿಯೊಬ್ಬರ ಜೀವನದಲ್ಲಿರಲಿ- ಸಿ.ಡಿ.ಗೀತಾ

ಕೊಪ್ಪಳ.ಅ.02- : ದಂಡಿ ಉಪ್ಪಿನಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿಯಂತಹ ಅನೇಕ ಹೋರಾಟಗಳ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜೀವನ ಚರಿತ್ರೆ ತಿಳಿದುಕೊಂಡು ಅವರ ಪ್ರತಿ ಹೆಜ್ಜೆಯ ಗುರುತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅಪರ ಜಿಲ್ಲಾಧಿಕಾರಿ ಸಿ.ಡಿ.ಗೀತಾ ತಿಳಿಸಿದರು.
ಅವರು (ಅ.2) ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂನಲ್ಲಿ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ಏರ್ಪಡಿಸಲಾದ ಗಾಂಧಿ ಜಯಂತಿ, ಗಾಂಧೀಜಿಯವರ ಛಾಯಾಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‍ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಗಾಂಧೀಜಿಯವರು ತಮ್ಮ ಬಾಲ್ಯದಲ್ಲಿ ಮಾಡಿದ ಅಪರಾಧದ ಅರಿವಾಗಿದ್ದರಿಂದ ಮುಂದೆ ಗಾಂಧೀಜಿಯು ಸತ್ಯ, ಅಹಿಂಸೆಯ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ. ಮಕ್ಕಳು ತಪ್ಪು ಮಾಡುವುದು ಸಹಜ, ಆದರೆ ಅರಿವಿಗೆ ಬಂದಾಗ ತಿದ್ದಿನಡೆಯಬೇಕೆಂದು ಹೇಳಲಾಗುತ್ತದೆ. ಮಾಡಿದ ತಪ್ಪುಗಳನ್ನು ಯಾರು ತಿದ್ದಿ ನಡೆದುಕೊಳ್ಳುತ್ತಾರೆ, ಅಂತಹವರು ಜೀವನದಲ್ಲಿ ಮುಂದೆ ಬಂದೇ ಬರುತ್ತಾರೆ ಎಂದು ಗಾಂಧೀಜಿವರ ಜೀವನದಲ್ಲಿ ನಡೆದ ಘಟನೆಯಿಂದ ತಿಳಿದುಕೊಳ್ಳಬಹುದಾಗಿದೆ. ಗಾಂಧೀಜಿಯವರು ಎಲ್ಲಾ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದು ತಮ್ಮ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆನ್ನುವ ಛಲವಿದ್ದಲ್ಲಿ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಬಹುದಾಗಿದೆ ಎಂದರು.
ಗಾಂಧೀಜಿಯವರ 150 ನೇ ವರ್ಷಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧೀಜಿಯವರ ಬಾಲ್ಯದಿಂದ ನಡೆಸಿದ ಹೋರಾಟ ಬದುಕನ್ನು ಬಿಂಬಿಸುವ ಅಪರೂಪದ ಛಾಯಾಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಹಾಗೂ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯು ಗಾಂಧೀಜಿಯವರ 150 ನೇ ವರ್ಷಾಚರಣೆ ಅಂಗವಾಗಿ ಸತ್ಯಮಾರ್ಗ ಹಾಗೂ ಶಾಂತಿ ಮಾರ್ಗ ಎಂಬ ಸ್ತಭ್ದಚಿತ್ರಗಳು ಸಂಚರಿಸಲಿದ್ದು ಕೊಪ್ಪಳ ಜಿಲ್ಲೆಗೂ ಆಗಮಿಸಲಿದೆ ಎಂದು ವಾರ್ತಾಧಿಕಾರಿ ಧನಂಜಯ ತಿಳಿಸಿದರು.
ಗಾಂಧೀಜಿಯವರ ಬಾಲ್ಯ ಹಾಗೂ ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿದ ಮತ್ತು ದಂಡಿ ಉಪ್ಪಿನಸತ್ಯಾಗ್ರಹ, ಕ್ವಿಟ್ ಇಂಡಿಯಾ ಚಳುವಳಿ, ಅಸ್ಪøಶ್ಯತಾ ನಿವಾರಣಾ ಚಳುವಳಿ, ದುಂಡು ಮೇಜಿನ ಪರಿಷತ್ತು, ವಿಭಜನೆ ವೇಳೆ ನಡೆದ ಘಟನಾ ಸ್ಥಳಕ್ಕೆ ಭೇಟಿ, ಬಿಲ್ರ್ಲಾ ಭವನದಲ್ಲಿ ನಡೆಸಿದ ಪ್ರಾರ್ಥನಾ ಸಭೆ, ಭಾಷಣ ಸೇರಿದಂತೆ 1948 ರ ಜನವರಿ 30 ವರೆಗಿನ ದೃಶ್ಯವುಳ್ಳ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಈ ವೇಳೆ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ವೀಕ್ಷಣೆ ಮಾಡಿದರು. ಆಡಿಟೋರಿಯಂನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಕ್ಕಾಗಿ ಎಲ್‍ಇಡಿ ಪರದೆಯನ್ನು ಅಳವಡಿಸಿದ್ದು ಈ ಭಾರಿಯ ವಿಶೇಷವಾಗಿತ್ತು.
ಅಂಬಿಕಾ ಮತ್ತು ತಂಡದವರು ಪ್ರಾರ್ಥನಾ ಗೀತೆಗಳನ್ನು ಹಾಡಿದರು. ಭಾರತ್ ಸೇವಾದಳದ ಬಸವನಗೌಡ ಪಾಟೀಲ್, ಗಾಂದ್ರಿಲಿಂಗಪ್ಪ ಇನ್ನಿತರರು ಭಾಗವಹಿಸಿದ್ದರು.
ಸ್ವಾತಂತ್ರ್ಯ ಹೋರಾಟಗಾರರಾದ ಸುಮಂತರಾವ್ ಪಟವಾರಿ, ಹನುಮಂತಗೌಡ ಪಾಟೀಲ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಉಪಸ್ಥಿತರಿದ್ದು ಪುಷ್ಪ ನಮನ ಸಲ್ಲಿಸಿದರು.
ಜಿಲ್ಲಾ ಆಡಳಿತ ಭವನದ ಮುಖ್ಯದ್ವಾರದಲ್ಲಿ ಗಾಂಧಿ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ ದಾದಾಪೀರ್ ರವರನ್ನು ಸನ್ಮಾನಿಸಲಾಯಿತು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಗಾಂಧಿ ಜಯಂತಿ ಅಂಗವಾಗಿ ಹೊರತಂದಿರುವ ಜನಪದ ಮಾಸಿಕ ಹಾಗೂ ಮಾರ್ಚ್ ಆಫ್ ಕರ್ನಾಟಕ ವಿಶೇಷ ಸಂಚಿಕೆಗಳು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಹೊರತಂದಿರುವ ಪಾಪು ಗಾಂಧಿ ಗಾಂಧಿ ಬಾಪು ಆದ ಕಥೆ ಕಿರುಪುಸ್ತಕ ಬಿಡುಗಡೆ ಮಾಡಿ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಯಿತು.
ಜಿಲ್ಲಾ ಸಾಂಖ್ಯಿಕ ಅಧಿಕಾರಿ ಕೃಷ್ಣಮೂರ್ತಿ ದೇಸಾಯಿ ನಿರೂಪಿಸಿದರು.

Please follow and like us:
error