ಗವಿಸಿದ್ದೇಶ್ವರ ಜಾತ್ರೆ :ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಣೆ

ಜಾತ್ರಾ ಆವರಣದಲ್ಲಿ ಸೇವೆಗೈದ ಮಹಿಳಾ ಪೌರ ಕಾರ್ಮಿಕರಿಗೆ ಮುಂದುವರೆದ ಸೇವಾ ಗೌರವ.

ಕೊಪ್ಪಳ – ನಗರದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವು ಪ್ರತಿ ವರ್ಷ ಅರ್ಥಪೂರ್ಣವಾಗಿ ಆಚರಣೆ ಯಾಗುತ್ತಿರುವದು ಭಕ್ತರಿಗೆ ಭಕ್ತಿ, ಭಾವ, ಸಂತಸವನ್ನು ಇಮ್ಮಡಿಗೊಳಿಸುತ್ತಲಿದೆ. ಜಾತ್ರಾಮಹೋತ್ಸವದಲ್ಲಿ ಲಕ್ಷ ಲ್ಷ ಜನ ಸೇರಿದರೂ ಬೆಳಿಗ್ಗೆ ನಾಲ್ಕು ಗಂಟೆಯಿಂದ ಸಂಜೆ ಆರು ಗಂಟೆಯವರೆಗೂ ಆವರಣವನ್ನು ಸ್ವಚ್ಛಗೊಳಿಸಿ ಜಾತ್ರಾ ವೈಭವವನ್ನು ಹೆಚ್ಚಿಸಿ, ತಮ್ಮನ್ನು ತಾವು ಕಾಯಕದಲ್ಲಿ ತೊಡಗಿಸಿಕೊಂಡ ಮಹಿಳಾ ಮುತೈದೆ ಪೌರ ಕಾರ್ಮಿಕರಿಗೆ 50 ಕ್ಕಿಂತಲೂ ಸೀರೆ, ಮಂಗಳದ್ರವ್ಯಗಳಾದ ಕುಂಕುಮ, ಅರಿಷಣ, ಹೂವು ಹಾಗೂ ಕುಪ್ಪುಸವನ್ನು ನೀಡಿ ಗೌರವಿಸುವ ಸತ್ಕರಿಸಿದ ಕಾರ್ಯ ಇಂದು ದಿನಾಂಕ 29-01-2019 ಮಂಗಳವಾರ ಬೆಳಿಗ್ಗೆ 8 ಗಂಟೆಗೆ ರೇಣುಕಾ ಸ್ಪೇಷಲ್ ಗೋಭಿ ಸೆಂಟರ್‍ನ ಮಾಲಿಕರಾದ ಪಕೀರಪ್ಪ ವಾಲಿಕಾರ ಬೂದಗೂಂಪಿ ಇವರು ನಡೆಸಿಕೊಟ್ಟರು. ಎಲ್ಲಾ ಹೊಟೇಲ್ ಮಾಲಿಕರು ಮತು ಯಾತ್ರಾರ್ಥಿಗಳು ಈ ಸೇವಾಗೌರವ ಸೇವೆಗೈದ ಕಾಯಕ ಜೀವಿ ಪೌರ ಕಾರ್ಮಿಕರ ಬಗ್ಗೆ ಅಭಿಮಾನವನ್ನು ವ್ಯಕ್ತಪಡಿಸುತ್ತದೆ. ಅಲ್ಲದೇ ಆಗಮಿಸಿದ ಎಲ್ಲ ಪುರುಷ ಹಾಗೂ ಮಹಿಳಾ ಕಾರ್ಮಿಕರಿಗೆ ಉಪಹಾರಗಳಾದ ಪಾವು ಭಜಿ, ಸಿರಾ, ಬಿಸಿಬೆಳೆಬಾತ್ ಹಾಗೂ ಚಹಾ ಇವುಗಳನ್ನು ಉಚಿತವಾಗಿ ಒದಗಿಸುವ ಸೇವೆಯನ್ನು ಮಾಡಿದರು. ಇನ್ನು ಹೆಚ್ಚು ಅಂಗಡಿ ಮಾಲೀಕರು ಪೌರ ಕಾರ್ಮಿಕರಿಗೆ ಇದೇ ತೆರಹದ ಸೇವೆಯನ್ನು ಮಾಡಲು ಸ್ವಯಂ ಮುಂದೆ ಬರುತ್ತಿದ್ದಾರೆ. ಸ್ವಚ್ಛತಾ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕಾರ್ಮಿಕರನ್ನು ಗೌರವದಿಂದ ಕಾಣುವ ಅಂಗಡಿ ಮಾಲೀಕರ ಮನೋಭಾವವನ್ನು ಗವಿಮಠದ ಶ್ರೀಗಳು ಶ್ಲಾಘಿಸಿದ್ದಾರೆ .

Please follow and like us:
error