ಗವಿಮಠ ಶ್ರೀಗಳ ಜೊತೆ ಅಮಿತ್ ಷಾ

ಕೊಪ್ಪಳ : ಕೊಪ್ಪಳ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಅಮಿತ್ ಶಾ ಗವಿಮಠಕ್ಕೆ ಭೇಟಿ ನೀಡಿದರು.

ಗವಿಮಠದ ಮಕ್ಕಳಿಂದ ಹೂ ಗುಚ್ಛ ನೀಡೋ ಮೂಲಕ ಅಮಿತ್ ಶಾಗೆ ಸ್ವಾಗತ ಕೋರಲಾಯಿತು.

ಗವಿಸಿದ್ದೇಶ್ವರನ ಗದ್ದುಗೆ ದರ್ಶನ ಪಡೆದ ಅಮಿತ್ ಶಾ ನಂತರ .ಗವಿಶ್ರೀಗಳನ್ನ ಭೇಟಿ ಮಾಡಿ ಮಾತನಾಡಿದರು. ಗವಿಮಠದ ಜಾತ್ರಾಮಹೋತ್ಸವ ಪರಂಪರೆ ಕುರಿತು ಸ್ವಾಮಿಜಿ ಅಮಿತ್ ಷಾರಿಗೆ ಮಾಹಿತಿ ನೀಡಿದರು. ಗವಿಮಠಕ್ಮೆ ಬೇಟಿ ನೀಡಿದ ಅಮಿತ್ ಶಾ ಜೊತೆ.ಸಂಸದ ಕರಡಿ ಸಂಗಣ್ಣ, ಸಂತೋಷಜಿ ಸಿ.ವಿ.ಚಂದ್ರಶೇಖರ ಉಪಸ್ಥಿತರಿದ್ದರು.