fbpx

ಗವಿಮಠ ಭಕ್ತರ ದರ್ಶನಕ್ಕೆ ಸರ್ವ ರೀತಿಯಲ್ಲಿ ಸಜ್ಜು

ಕೊಪ್ಪಳ : ಲಾಕಡೌನ ನಿಂದಾಗಿ ಕಳೆದ ೭೫ ದಿನಗಳಿಂದ ಭಕ್ತರಿಗೆ ಅಲಭ್ಯವಾಗಿದ್ದ ಗವಿಮಠದ ದರ್ಶನ ನಾಳೆಯಿಂದ ಲಭ್ಯವಾಗಲಿದೆ. ಸಾರ್ವಜನಿಕರು, ಭಕ್ತರು ನಾಳೆಯಿಂದ ಗವಿಮಠದ ದರ್ಶನ ಮಾಡಬಹುದು. ಇದಕ್ಕಾಗಿ ಸರ್ವ ರೀತಿಯಲ್ಲಿ ಸಿದ್ದತೆಗಳನ್ನು ಮಾಡಲಾಗಿದೆ. ಬರುವ ಭಕ್ತರ ಥರ್ಮಲ್ ಸ್ಕ್ಯಾನಿಂಗ್ ಸ್ಕ್ರೀನಿಂಗ್ ಮಾಡಲು ವೈದ್ಯರ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡಲು ಅನುಕೂಲವಾಗಲು ಬಾಕ್ಸ್ ಗಳನ್ನು ಹಾಕಲಾಗಿದೆ ಈ ಮೂಲಕ ಬರುವ ಭಕ್ತರು ಕನಿಷ್ಠ ಅಂತರ ಕಾಪಾಡಿಕೊಳ್ಳಲು ಸಹಾಯಕವಾಗಲಿದೆ. ಸ್ಯಾನಿಟೈಜರ್ ವ್ಯವಸ್ಥೆಯ ನ್ನು ಮಾಡಲಾಗಿದ್ದು ಭಕ್ತರ ಆರೋಗ್ಯದ ದೃಷ್ಟಿಯಿಂದ ಎಲ್ಲ ಸಿದ್ದತೆಗಳನ್ನು ಮಾಡಲಾಗಿದೆ. ದಾಸೋಹದ ವ್ಯವಸ್ಥೆ ಇನ್ನೂ ಪೂರ್ಣಪ್ರಮಾಣದಲ್ಲಿ ಮಾಡಲಾಗಿಲ್ಲ. ಆದರೆ ದೂರದಿಂದ ಬರುವ ಭಕ್ತರಿಗೆ ದಾಸೋಹ ವ್ಯವಸ್ಥೆ ಇರಲಿದೆ. ಕೆಲವು ವಾರಗಳ ಮಟ್ಟಿಗೆ ದಾಸೋಹಕ್ಕೆ ಸ್ಟೀಲ್ ತಟ್ಟೆಗಳನ್ನು ಬಳಸುವುದಿಲ್ಲ. ಮುಂದಿನ ದಿನಗಳಲ್ಲಿ ಬೆಳವಣಿಗೆ ನೋಡಿ ವ್ಯವಸ್ಥೆ ಮಾಡಲಾಗುವುದು, ಭಕ್ತರ ಅನುಕೂಲಕ್ಕೆ ವೈದ್ಯಕೀಯ ಸಿಬ್ಬಂದಿಗಳು ಗವಿಮಠದ ಸಿಬ್ಬಂದಿಗಳು ಇರುತ್ತಾರೆ ಎಂದು ಗವಿಮಠದ ಶ್ರೀಗಳು ತಿಳಿಸಿದ್ದಾರೆ.

Please follow and like us:
error
error: Content is protected !!