ಗವಿಮಠವು ಈ ನಾಡಿನ ಬಹು ದೊಡ್ಡ ಮಠ – ಐ.ಜಿ.ಪಿ ಮಾನ್ಯ ನಂಜುಂಡಸ್ವಾಮಿ

“ಜೀವನದರ್ಶನ” ಕಾರ್ಯಕ್ರಮ –
 
ಕೊಪ್ಪಳ: ಇತ್ತಿಚಿನ ಪೋಲಿಸ್ ನೇಮಕಾತಿಯಲ್ಲಿ ಕೊಪ್ಪಳದವರೇ ಹೆಚ್ಚಾಗಿ  ಪೋಲಿಸರಾಗುತ್ತಿದ್ದಾರೆ. ಪ್ರಮುಖ ಜಿಲ್ಲೆಗಳಾದ ಬೆಂಗಳೂರ, ಮಂಗಳೂರ ,ಉಡುಪಿ, ತುಮಕೂರ, ಚಾಮರಾಜ ನಗರ, ಮಂಡ್ಯ, ಹಾಸನ ಮೊದಲಾದ ಕಡೆ ಸೇವೆ 
ಸಲ್ಲಿಸುತ್ತಿರುವ ಪೋಲಿಸರಿಗೆ ನಿಮ್ಮ ಊರು ಯಾವುದು? ಎಂದರೆ ಕೊಪ್ಪಳ  ಎನ್ನುತ್ತಾರೆ. ಕರ್ನಾಟಕ್ ಸ್ಟೆಟ್ ಪೋಲಿಸ್ ಎಂದರೆ ಕೊಪ್ಪಳ ಪೋಲಿಸ್ ಎಂಬಂತಾಗಿದೆ ಎಂದು  ಬಳ್ಳಾರಿ ವಲಯದ ಐ.ಜಿ.ಪಿ ಮಾನ್ಯ ನಂಜುಂಡಸ್ವಾಮಿ ಇವರು ಗವಿಸಿದ್ಧೆಶ್ವರ 
ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ “ಜೀವನದರ್ಶನ”  ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಪ್ಪಳವು ಪುರಾತನ 
ಕಾಲದಿಂದಲೂ ಚರಿತ್ರೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುತ್ತದೆ. ಮೌರ್ಯ ಚಕ್ರವರ್ತಿ ಆಶೋಕನನು ಇಲ್ಲಿ ನಿರ್ಮಿಸಿದ ಶಿಲಾಶಾಸನಗಳು ಕೊಪ್ಪಳದ 
ಪ್ರಾಚೀನತೆಗೆ ಸಾಕ್ಷಿ. ಕವಿರಾಜ ಮಾರ್ಗಕಾರ ಶ್ರಿÃವಿಜಯನು ಉಲ್ಲೆÃಖಿಸಿರುವ 
“ತಿರುಳ್ಗನ್ನಡ” ದ ನಾಡಿನಲ್ಲಿ ಕೊಪ್ಪಳವು ಒಂದಾಗಿದ್ದು ಗವಿಮಠವು ಈ ನಾಡಿನ ಬಹು 
ದೊಡ್ಡ ಮಠವಾಗಿ ಅನ್ನ,ಅರಿವು, ಆರೋಗ್ಯ ಮತ್ತು ದಾಸೋಹ ಪರಂಪರೆಯನ್ನು 
ಉಳಿಸಿಕೊಂಡಿದ್ದು ಇಂತಹ ನೆಲದಲ್ಲಿ ಬದುಕುವದೇ ಪುಣ್ಯವೆಂದರು. 
ನಾವು ಎಲ್ಲಿಂದ ಬಂದಿದ್ದೆÃವೆ, ಎಲ್ಲಿ ಇರುತ್ತೆÃವೆ, ಎಲ್ಲಿಗೆ ಹೋಗಬೇಕೆಂದು ವಿಚಾರ ಸಹ 
ಮಾಡುತ್ತಿಲ್ಲ. ಈ ರೀತಿ ಸಾಗುವದು ಬದುಕಲ್ಲ. ವಿದ್ಯಾರ್ಥಿ ಜೀವನದಲ್ಲಿ ಕಷ್ಟಪಟ್ಟು ಓದಿದಾಗ 
ಮಾತ್ರ ಯಶಸ್ಸು ಲಭಿಸುತ್ತದೆ. ಪಠ್ಯದ ಜೊತೆಗೆ ಹೊಸÀ ಜನರನ್ನು 
ಪರಿಚಯಿಸಿಕೊಳ್ಳುವದರ ಮೂಲಕ, ಹೊಸ ಸ್ಥಳಗಳಿಗೆ ತೆರಳುವದರ ಮೂಲಕ, 
ಹೊಸ ಆಲೋಚನೆಗಳನ್ನು ಮಾಡಿಕೊಳ್ಳುವದರ ಮೂಲಕ ಹಾಗು ಹೊಸ 
ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವದರ ಮೂಲಕ ಪಕ್ವತೆಯನ್ನು 
ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯವನ್ನು ದಿನವಿಡೀ ತೆರದಿಟ್ಟು 
ವಿದ್ಯಾರ್ಥಿಗಳ ಜ್ಞಾನ ದಾಹವನ್ನು ನೀಗಿಸುವಂತಹ ಪ್ರಯತ್ನಗಳು ಜರುಗಲಿ. 
ಜೊತೆಗೆ ಬುದ್ದ, ಬಸವ,ಅಂಬೇಡ್ಕರ ಅವರ ಚಿಂತನೆಗಳು ಅಗತ್ಯವೆಂದರು. 
ಸಂಸ್ಥೆಯ ಕಾರ್ಯದರ್ಶಿ ಎಸ್ ಮಲ್ಲಿಕಾರ್ಜುನ್, ಪದವಿ ಪ್ರಾಚಾರ್ಯ ಎಂ.ಎಸ್ ದಾದ್ಮಿ, 
ಪದವಿಪೂರ್ವ ಪ್ರಾಚಾಂiÀið ಡಾ.ಸಿದ್ದಲಿಂಗಪ್ಪ ಕೊಟ್ನೆÃಕಲ್, ಸಂಯೋಜನಾಧಿಕಾರಿ 
ಪರೀಕ್ಷಿತರಾಜ ಸಮಸ್ತ ಬೋಧಕ ಮತ್ತು ಬೋಧಕೇತರ ಸಿಬ್ಬಂಧಿಗಳು, 
ವಿದ್ಯಾರ್ಥಿಬಳಗ ಭಾಗವಹಿಸಿದ್ದರು. ಪ್ರಾರ್ಥನೆ ವರ್ಷಿಣಿ ಸಂಕ್ಲಾಪುರ ಸಂಗಡಿಗರು, 
ನಿರೂಪಣೆ ಪ್ರಾ.ಶರಣಬಸಪ್ಪ ಬಿಳಿಯಲಿ ನೆರವೇರಿಸಿದರು.

Please follow and like us:

Related posts