ಗವಿಮಠದ ಜಲದೀಕ್ಷೆ ಕಾರ್ಯಕ್ರಮಕ್ಕೆ ಮೋದಿ ಮೆಚ್ಚುಗೆ

ಕೊಪ್ಪಳ : ಗವಿಮಠದ ಜಲದೀಕ್ಷೆಯ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ ಪ್ರದಾನಿ ನರೇಂದ್ರ ಮೋದಿ ಮುಂದಿನ ದಿನಗಳಲ್ಲಿ ಆ ಕಾರ್ಯಕ್ರಮವನ್ನು ಮುಂದುವರೆಸುವುದಾಗಿ ಹೇಳಿದರು.

ಕೊಪ್ಪಳದಲ್ಲಿ ಬಿಜೆಪಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ ಕನ್ನಡದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮಿಗಳಿಗೆ ನಮನ ಮಾಡಿದರು.

ನಮ್ಮ ದೇಶ ರಾಮನನ್ನು ನೆನೆಸುತ್ತದೆ. ಶಬರಿಯನ್ನು ಮರೆಯುವುದಿಲ್ಲ

ರಾಮ ಮತ್ತು ಶಬರಿಯವ ಸಂಬಂಧ ಅಂಥ ವಿಶ್ವಾಸ ನಂಬಿಕೆ ಈ ಕೊಪ್ಪಳದ ಜನರಲ್ಲಿ‌ ಇದೆ

ಬಿಜೆಪಿ ಕಾರ್ಯಕರ್ತರು ಶ್ರೀ ರಾಮರ ಮೇಲೆ ಭಕ್ತಿ ತೋರಿಸುತ್ತಾರೆ

ನಮ್ಮದು ಸಬ್ಕಾ ಸಾಥ್ ಸಬ್ಕಾ ವಿಕಾಸ ಕನಸು

೭೦ ವರ್ಷಗಳ ಕಾಲ ಆಡಳಿತ ಮಾಡಿದ ಪಕ್ಷ ಕೇವಲ ಕುಟುಂಬ ರಾಜಕಾರಣ ಮಾಡಿದೆ

ಅವರಿಗೆ ತಮ್ಮ ಕುಟುಂಬ ಅಭಿವೃದ್ಧಿ ಗಾಗಿ ರಾಜಕೀಯ ಮಾಡಿದ್ದಾರೆ ದೇಶದ ಅಭಿವೃದ್ಧಿ ಗಾಗಿ ಅಲ್ಲ ಅ.ಧಿಕಾರಕ್ಕಾಗಿ ಯಾವುದೇ ಮಟ್ಟಕ್ಕೂ ಇಳಿಯುವ ಪಕ್ಷ ಅದು

ಸ್ವಾರ್ಥಕ್ಕಾಗಿ ಮನೆತನಗಳನ್ನು ಜಾತಿಗಳನ್ನಯ ಜನರನ್ನು ಒಡೆಯುವ ಪಕ್ಷ ಅದು

ಕಾಂಗ್ರೆಸ್ ಪಕ್ಷ ತನ್ನ ವಿಕೃತ ಮನಸ್ಸಿನಿಂದ ಈ ದೇಶವನ್ನು ಜಾತಿ‌ ಮೂಲಕ ಒಡೆಯುತ್ತಿದೆ

ಯಡಿಯೂರಪ್ಪ ನವರ ಸರ್ಕಾರ ಇದ್ದಾಗ ಈ ರಾಜ್ಯದ ಸಂಸ್ಕೃತಿ ಉಳಿದಿತ್ತು

ಕಾಂಗ್ರಸ್ ಸರ್ಕಾರ ಬಂದ್ಮೇಲೆ ಸಂಸ್ಕ್ರತಿ ಉಳಿದಿಲ್ಲ‌ ಪ್ರವಾಸಕ್ಕೂ ಹೊಗಲು ಜಾತಿ ಮಾಡುತ್ತಿದೆ

ಈ ಭಾಗದಲ್ಲಿ ಐತಿಹಾಸಿಕ, ಸಂಸ್ಕೃತಿ ಸ್ಥಳಗಳಿವೆ ಅದರ ಅಭಿವೃದ್ಧಿ ಮಾಡುವ ಕೆಲಸ ಮಾಡಿಲ್ಲ

೫೦ ಸಾವಿರ ಕೋಟಿ ಯಾತ್ರ ಸ್ಥಳ ಅಭಿವೃದ್ಧಿ ಯೋಜನೆಯಿಂದ ವಿವಿಧ ಯಾತ್ರ ಸ್ಥಳಗ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ

ಕೊಪ್ಪಳದ ಈ‌ಭಾಗದ ಜನತೆಗೆ ರಾಮಾಯಣ ಸ್ಥಳ ಏನಿದೆ ಅದರಿಂದ ಪ್ರಯೋಜನ ವಾಗಲಿದೆ

ಆನೆಗೊಂದಿ, ಹಂಪಿಗೆ ಪ್ರಯೋಜನವಾಗಲಿದೆ

ಹನುಮಾನ ಮತ್ತು ಶ್ರೀರಾಮರ ಪವಿತ್ರ ಸ್ಥಳಗಳಿವು

ಅಂಜಿನಾದ್ರ ಬೆಟ್ಟ ಇಡೀ ವಿಶ್ವಕ್ಕೆ ಖ್ಯಾತಿಯಾಗಿದೆ

ಇದನ್ನು ವಿಶ್ವಮಟ್ಟದ ಯಾತ್ರ ಸ್ಥಳ ಮಾಡುವುದೇ ನನ್ನ ಕನಸು

ಹವಾಯಿ ಚಪ್ಪಲ ಹಾಕುವವನು ಹವಾಯಿ ಜಹಾಜ್ ನಲ್ಲಿ ಕೂಡವಂತೆ ಮಾಡುತ್ತೇನೆ

ಯಡಿಯೂರಪ್ಪ ನವರ ಪ್ರಣಾಳಿಕೆಯಲ್ಲಿ ಯಾತ್ರ ಸ್ಥಳಗಳಿಗೆ ಹೆಚ್ಚಿನ ಅನುದಾನ ಕೊಡಲಾಗುವುದು

ಶೌಚಾಲಯ ಆಂದೋಲ ಆರಂಭ ಮಾಡಿದ ಮಲ್ಲಮ್ಮನನ್ನು‌ ನೆನೆಸಿದ ಮೋದಿ

ಎರಡು ವರ್ಷದ ಕೆಳಗಡೆ ಮಲ್ಲಮ್ಮ‌ನ ಹೆಸರು ಮನ್ ಕಿ ಬಾತ್ ನಲ್ಲಿ ನಾನು ಪ್ರಸ್ತಾಪಿಸಿದ್ದೆ

ದೇಶದ ಶೌಚಾಲಯ ಅಭಿಯನಕ್ಕೆ ಪ್ರೇರಣೆ ಮಲ್ಲಮ್ಮ

ಮಲ್ಲಮ್ಮನಳಂಥ ಮಗಳು ಇಡೀ ದೇಶಕ್ಕೆ ಆಷರ್ಶ

ಮಲ್ಲಮ್ಮ ಜನಿಸಿದ ಈ ಭೂಮಿಗೆ ನನ್ನ‌ ನಮನ

ನಮ್ಮ ತಾಯಿ ಅಕ್ಕಂದಿರು ಗ್ರಾಮದಲ್ಲಿ‌ ಇಂದಿಗೂ ಬಯಲು ಶೌಚಾಲಯಕ್ಕೆ ಹೋಗಬೇಕಾದ ಸ್ಥಿತಿ ಇದೆ

ಮಹಿಳೆಯರ ಈ ಸ್ಥಿತಿಯನ್ನು ಅರಿತು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದ್ದು

ಈ ಅಭಿಯಾನಕ್ಕೆ ನನ್ನನ್ನು ಹಾಸ್ಯ ಮಾಡಿದ್ದರೂ

ಬಂಗಾರ ಚಮಚವನ್ನು ಹಿಡಿದವರಿಗೆ ಬಡವರ ಕಷ್ಟ ಏನು ಗೊತ್ತು

ಶೌಚಾಲಯದ ವ್ಯವಸ್ಥೆ ಶೇ ೪೦ ರಷ್ಟು ಇಂದು ಶೇ ೮೦ ರಷ್ಟು ಪೂರ್ಣಗೊಂಡಿವೆ

ತಾಯಿಂದಿರು ಹೊಗೆಯಿಂದ ಶ್ವಾಸಕೋಶದ ಸಮಸ್ಯ ಅನುಭವಿಸುತ್ತಿದ್ದರು

ಹಳ್ಳಿಗಳಲ್ಲಿ ತಾಯಿಂದರು ಕಟ್ಟಿಗೆ ತಂದು ಅಡುಗೆ ಮಾಡುತ್ತಿದ್ದರು

ಗಾಳಿಯಿಂದ ಹೊಗೆ ಜಾಸ್ತಿಯಾಗಿ ಅವರು ಕಷ್ಟ ಅನುಭಿಸುತ್ತಿದ್ದು

ಅದನ್ನು ಅರಿತ ನಾವು ಉಜ್ವಲ ಯೋಜನೆ ಜಾರಿಗೆ ತಂದಿದ್ದು

ಗರ್ಭದಲ್ಲಿ ಹೆಣ್ಣು ಮಳನ್ನು ಸಾಯಿಸಲಾಗುತ್ತಿತ್ತು

೧೦೦೦ ಗಂಡು ಮಕ್ಕಳಿಗೆ ೮೫೦೦ ಹೆಣ್ಣು ಮಕ್ಕಳಿದ್ದರು

ಹೆಣ್ಣು ಗಂಡು ಸಮಾನತೆಗಾಗಿ ನಮ್ಮ ಸರ್ಕಾರ ಕಾನೂನುಗಳನ್ನು ಜಾರಿಗೆ ತರಲಾಗಿದೆ

ವಿಕೃತ ಮನಸ್ಸುಗಳು ನಮ್ಮ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿವೆ

ಅಂಥ ಮನಸ್ಸುಗಳಿಗೆ ಗಲ್ಲಿಗೆ ಏರಿಸುವ ಕಾನೂನು ಜಾರಿಗೆ ತರಲಾಗಿದೆ.

ಅತ್ಯಂತ ಹೆಚ್ಚು ಭತ್ತ ಬೆಳೆಯುವ ನಾಡು ಇದು

ಇಲ್ಲನ ಭತ್ತ ಇಡೀ ವಿಶ್ವಕ್ಕೆ ಖ್ಯಾತಿ ಪಡೆದಿದೆ

ಆದ್ರೆ ಇಲ್ಲಿನ ರೈತ ನೀರಿಗಾಗಿ ತತ್ತರಿಸುತ್ತಿದ್ದಾನೆ

ತನ್ನ ಬೆಳೆಗೆ ನೀರು ಇಲ್ಲದೆ ಬೆಳೆ ನಷ್ಟ ಅನುಭಿವಿಸಿದ್ದಾನೆ

ಪಕ್ಕದಲ್ಲಿ ತುಂಗಭದ್ರಾ ಜಲಾಶಯವಿದ್ದರೂ ಅನ್ನದಾತನಿಗೆ ನೀರಿಲ್ಲ

ಇಲ್ಲಿನ‌ ನೀರಾವರಿ ಅಭಿವೃದ್ಧಿ ಯೋಜನೆಗಳು ರೈತನಿಗೆ ಲಾಭಾಗಿಲ್ಲ

ಸಿದ್ದರಾಮಯ್ಯ ಸರ್ಕಾರ ಏನು ಭರವಸೆ ನೀಡಿತ್ತು ಅದು ಈಡೇರಿಸಿಲ್ಲ

ನೀರಾವರಿಗಾಗಿ ೧೦ ಸಾವಿರ ಕೋಟಿ ಕೊಡುವ ಭರವಸೆ ನೀಡಿತ್ತು ಅದು ಪೂರ್ಷಗೊಳಿಸಿಲ್ಲ

ಇಲ್ಲಿ ಕುಡಿಯುವ ನೀರಿನ‌ ಸಮಸ್ಯೆ ಕೂಡ ಬಹಳ ಇದೆ

ಅದಕ್ಕಾಗಿ ಗವಿಸಿದ್ದೇಶ್ವರ ಮಠ ಜಲಾಧಿಕ್ಷೆ ಅಭಿಯಾನ ಮಾಡಿತ್ತು

ಅದನ್ನು ಬಿಜೆಪಿ ಮುಂದುವರೆಸುತ್ತದೆ ಎಂದು ಹೇಳಿದರು.

Please follow and like us:
error