ಗವಿಮಠದ ಕೆರೆಯಲ್ಲಿ ತೆಪ್ಪೋತ್ಸವ :

ಕೊಪ್ಪಳ: ನಗರದ ಶ್ರೀ ಗವಿಮಠದ ಜಾತ್ರಾ iಹೋತ್ಸವದ ನಿಮಿತ್ಯ ಪ್ರತಿ ವರ್ಷವೂ ವೈಶಿಷ್ಟ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತಿದ್ದು ಈ ವರ್ಷದ ಜಾತ್ರೆಯ ಮತ್ತೊಂದು ವೈಶಿಷ್ಠ್ಯವೇ ತೆಪ್ಪೋತ್ಸವ. ತೆಪ್ಪೊತ್ಸವ ಎಂದರೆ ಬಾವಿ, ಕೆರೆ, ನದಿಗಳಲ್ಲಿ ತೆಪ್ಪದ ಮೇಲೆ ನಡೆಯುವ ದೇವರ ಉತ್ಸವೆಂದು ಅರ್ಥ. ಎರಡು ತೆಪ್ಪಗಳ ನಡುವೆ ನಿರ್ಮಿಸಲಾದ ವೇದಿಕೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾಧ್ಯಗಳೊಂದಿಗೆ ಕರೆ ತಂದು ಬಾಳೆ ಗಿಡ, ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಇರಿಸಿ ಮೂರ್ತಿಯನ್ನು ಹೊತ್ತ ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿನ ಅಂಬಿಗರು ಹುಟ್ಟು ಹಾಕಿ ಪುಷ್ಕರಣಿಯಲ್ಲಿ ಪ್ರದಕ್ಷಿಣೆ ಹಾಕಿಸುವ ಈ ತೆಪ್ಪೋತ್ಸವ ಹೈದ್ರಾಬಾದ್ ಕರ್ನಾಟಕದಲ್ಲಿಯೆ ಪ್ರಪ್ರಥಮ ಬಾರಿಗೆ ದಿ  ೩೧-೧೨-೨೦೧೭ರ ರವಿವಾರದಂದು ಶ್ರೀಮಠದ ಕೆರೆಯಲ್ಲಿ ಸಂಜೆ ೬:೦೦

ಗಂಟೆಗೆ ಜರುಗಲಿದೆ. ಆಗಮಿಸಿದ ಭಕ್ತರುಗವಿಸಿದ್ಧೇಶ್ವರ ಮಹಾರಾಜಕಿ ಜೈ, ಗವಿಸಿದ್ಧೇಶ್ವರ ಮಹಾರಾಜಕಿ ಜೈ, ಎಂದು ಶ್ರೀ ಗವಿಸಿದ್ಧೇಶ್ವರನಿಗೆ ಜಯಘೋಷಗಳನ್ನು ಕೂಗುತ್ತಾ ಧನ್ಯತಾ ಭಾವವನ್ನು ಅರ್ಪಿಸುವರು. ಈ ವರ್ಷ ಸಕಾಲಕ್ಕೆ ಮಳೆ ಬಂದು ಕೆರೆ ತುಂಬಿ ತುಳುಕುತ್ತಿದೆ. ಈ ತೆಪ್ಪೋತ್ಸವಕ್ಕೆ ಭಕ್ತರು ಆಗಮಿಸಿ ಗವಿಸಿದ್ಧೇಶ್ವರರಿಗೆ ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಭಕ್ತಾದಿಗಳಲ್ಲಿದೆ. ಜಿಲ್ಲೆಯ ಮತ್ತು ನಾಡಿನ ವಿವಿಧಡೆಗಳಿಂದ ಸಹಸ್ರಾರು ಭಕ್ತ ಸಮೂಹ ತೆಪ್ಪೋತ್ಸವಕ್ಕೆ ಸಾಕ್ಷಿಯಾಗುವರು.ಹ್ಯಾಟಿ ಗ್ರಾಮದ ಕನಕಪ್ಪ ನಾಯಕ್ ಎಂಬ ಅಂಬಿಗನ ನೇತೃತ್ವದಲ್ಲಿ ೧೦ ಜನರ ತಂಡದೊಂದಿಗೆ ೨ ಡೋಣಿಗಳನ್ನು ತೆಪ್ಪೋತ್ಸವಕ್ಕೆ ಬಳಕೆ ಮಾಡಿಕೊಂಡು ೧ ಡೋಣಿಯನ್ನು ಸುರಕ್ಷತೆಗಾಗಿ ಬಳಸಲಾಗುತ್ತದೆ. ಗವಿಸಿದ್ದನ ಉತ್ಸವ ಮೂರ್ತಿಯನ್ನು ಡೋಣಿಯಲ್ಲಿ ಇಟ್ಟು ಕೆರೆಯಲ್ಲಿ ಪ್ರದಕ್ಷಿಣೆ ಹಾಕುವ ಕಾರ್ಯ ಭರದಿಂದ ಸಾಗುತ್ತದೆ.

Please follow and like us:
error