ಗಮನ ಸೆಳೆದ ಕುಂಭ ಮೆರವಣಿಗೆ

ಗಮನ ಸೆಳೆದ ಕುಂಭ ಮೆರವಣಿಗೆ ವೇದಿಕೆ ಕಾರ್ಯಕ್ರಮಕ್ಕೂ ಮುನ್ನ, ನಗರದ ಪ್ಯಾಟಿ ಈಶ್ವರ ದೇವಸ್ಥಾನದಿಂದ ಆರಂಭವಾದ ರಾಣಿ ಚನ್ನಮ್ಮ ಭಾವಚಿತ್ರ ಮೆರವಣಿಗೆಯಲ್ಲಿ 1108 ಜನ ಮಹಿಳೆಯರು ಕುಂಭ ಹೊತ್ತು ಸಾಗಿದರು. ಬೆಣಕಲ್ ಗ್ರಾಮದ ನೂಲಿ ಚೆಂದಯ್ಯ ಹಲಗಿ ಮೇಳ, ಕುಷ್ಟಗಿಯಿಂದ ಬಂದಿದ್ದ ಜ್ಯೋತಿ ಮಹಿಳಾ ಡೊಳ್ಳು ಕುಣಿತ ತಂಡಗಳ ಕಲಾ ಪ್ರದರ್ಶನ ಮೆರವಣಿಗೆಯ ಮೆರಗು ಹೆಚ್ಚಿಸಿದವು. ಪಂಚಮಸಾಲಿ ಸಮಾಜದ ಬಹುತೇಕ ಗಣ್ಯರ ಸಹಿತ, ಇತರ ಗಣ್ಯರು ಹಾಗೂ ಚನ್ನಮ್ಮ ಅಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Please follow and like us:
error