ಗದ್ದುಗೆ ಗುದ್ದಾಟ: ಗಂಗಾವತಿ ನಗರಸಭೆ ಸದಸ್ಯನ ಮೇಲೆ ಹಲ್ಲೆ

ನಗರಸಭೆಯ   ಸದಸ್ಯ ಹಾಗೂ  ಹಣಕಾಸು ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷ ಮನೋಹ ರಸ್ವಾಮಿ  ಮೇಲೆ ಅಪರಿಚಿತ ಯುವಕರ ಗುಂಪೊಂದು ರಾತ್ರಿ ಹಲ್ಲೆ ಮಾಡಿ ಪರಾರಿಯಾಗಿದೆ.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿರುವ ವಿಜಯಚಂದ್ರಶೇಖರ ಟ್ರೇಡಿಂಗ್ ಕಂಪನಿ ಎಂಬ ತಮ್ಮ ದಲ್ಲಾಳಿ ಅಂಗಡಿಯಲ್ಲಿ ಇದ್ದ ಮನೋಹರಸ್ವಾಮಿ ರಾತ್ರಿ ಹತ್ತು ಗಂಟೆ ಸುಮಾರಿಗೆ ಅಂಗಡಿಯ ಬೀಗ ಹಾಕಿ ಹೊರಕ್ಕೆ ಹೋಗಲು ಯತ್ನಿಸಿದ್ದಾರೆ.  ಈ ವೇಳೆ ಅಂಗಡಿಗೆ ಬಂದ ಯುವಕನೊಬ್ಬ ಕುಡಿಯಲು ನೀರು ಕೇಳಿದ. ನೀಡಲು ಮುಂದಾದಾಗ ಮತ್ತೊಬ್ಬ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸತೊಡಗಿದ. ನೀವು ಯಾರು ಎಂದು ಕೇಳುವ ಹೊತ್ತಿಗೆ ನನ್ನ ಕೈಯಲ್ಲಿದ್ದ ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಮಾಹಿತಿ ತಿಳಿದು ಮನೋಹರಸ್ವಾಮಿ ಅವರ ಕೆಲ ಬೆಂಬಲಿಗರು ಸ್ಥಳಕ್ಕೆ ಆಗಮಿಸುವ ಹೊತ್ತಿಗೆ ದ್ವಿಚಕ್ರ ವಾಹನವೊಂದನ್ನು ಬಿಟ್ಟು ಯುವಕರು ಓಡಿ ಹೋಗಿದ್ದಾರೆ. ಹಲ್ಲೆ ಮಾಡಿದ ಯುವಕರ ಪೈಕಿ ಒಬ್ಬನನ್ನು ನವೀನ್ ಎಂದು ಗುರುತಿಸಲಾಗಿದ್ದು ಈ ಬಗ್ಗೆ ಗಂಗಾವತಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಶನಿವಾರ ಇಲ್ಲಿನ ಸರ್ಕಾರಿ ಉಪವಿಭಾಗ ಆಸ್ಪತ್ರೆಗೆ ದಾಖಲಾದ ಮನೋಹರಸ್ವಾಮಿಗೆ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.  ಎಕ್ಸರೇ ಮಾಡಲಾಗಿದೆ. ಇದು ಗಂಗಾವತಿ ನಗರಸಭಾ ಅಧಿಕಾರದ ಗದ್ದಿಗೆ ಗುದ್ದಾಟ ಎಫೆಕ್ಟ್ ಎಂದು ಹೇಳಲಾಗುತ್ತಿದೆ .ಶಾಸಕ ಇಕ್ಬಾಲ ಆನ್ಸಾರಿ ಬೆಂಬಲಿತ ಸಣ್ಣ ಹುಲಿಗೆಮ್ಮ  ನಗರ ಸಭೆಯ ಅಧ್ಯಕ್ಷರಾಗಿ ಅವರು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ.ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕೊಪ್ಪಳ ಜಿಲ್ಲಾಧಿಕಾರಿಗೆ ದೂರು ನೀಡಿದ್ದು ಸಣ್ಣ ಹುಲಿಗೆಮ್ಮಳ ಸದಸ್ಯತ್ವ ರದ್ದು ಮಾಡಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದರು ಧಾರವಾಡ ಹೈಕೋರ್ಟ ತಡೇಯಾಜ್ಞೆ ನೀಡಿದ ಹಿನ್ನೆಲೆ ಸಣ್ಣ ಹುಲಿಗೆಮ್ಮ ಗಂಗಾವತಿಯ ನಗರ ಸಭೆಯ ಅಧ್ಯಕ್ಷರಾಗಿ ಸ್ವಿಕರಿಸಿರುವ ಹಿನ್ನೆಲೆಯಲ್ಲಿ ಮುಖಭಂಗವಾದ ಹಿನ್ನೆಲೆ ದಾಳಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.    ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 176/2017 ಕಲಂ. 143, 147, 148, 323, 324, 395, 506 ಸಹಿತ 149  ಐ.ಪಿ.ಸಿ  ಯಡಿ ಪ್ರಕರಣ ದಾಖಲಾಗಿದೆ.  ಆರೋಪಿಗಳು ಪರಾರಿಯಾಗಿದ್ದಾರೆ.