ಗಣೇಶೊತ್ಸವವೂ ಯುವಜನತೆಯಲ್ಲಿ ಒಗ್ಗಟ್ಟು ಮೂಡಿಸುತ್ತದೆ-ಸಿ.ವಿ.ಚಂದ್ರಶೇಖರ

ಕೊಪ್ಪಳ:  ಗಣೇಶೊತ್ಸವವೂ ಯುವಜನತೆಯಲ್ಲಿ ಒಗ್ಗಟ್ಟು ಮೂಡಿಸಿ ನಮ್ಮ ಸಂಸ್ಕ್ರ್ ತಿಯ ಉಳಿವಿಗೆ ನೆರವಾಗುತ್ತದೆ. ಹಿಂದೂಗಳ ಧಾರ್ಮಿಕ ಹಬ್ಬಗಳಲ್ಲಿ ಒಂದಾದ ಗಣೇಶ ಚತುರ್ಥಿಯನ್ನು ಶಿಸ್ತು ಶಾಂತಿ ಸಂಯಮದಿಂದ ಆಚರಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಶರಾದ ಸಿ.ವಿ ಚಂದ್ರಶೇಖರ ಹೇಳಿದರು. ಕೊಪ್ಪಳ ನಗರದ  ಸಾರ್ವಜನಿಕ ಗಜಾನನ ಪ್ರತಿಷ್ಠಾಪನ ಸ್ಥಳಗಳಿಗೆ ಭೇಟಿ ನೀಡಿ ವಿಘ್ನೇಶ್ವರನ ದರ್ಶನ ಪಡೆದು ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಸಾರ್ವಜನಿಕರಿಗೆ ಯುವಕರಿಗೆ ಕಿವಿ ಮಾತು ಹೇಳಿದರು.

ಈ ಸಂದರ್ಬದಲ್ಲಿ ದೇವರಾಜ ಹಾಲಸಮುದ್ರ, ಶರಣುಗೌಡ ಪಾಟೀಲ್ˌ ಸಂಜಯ್ ವಿರೇಶ ದ್ಶಾಮಣ್ಣ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು