ಗಣಿ-ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಸೇವೆಯಿಂದ ಅಮಾನತ್ತು

ಕೊಪ್ಪಳ : ರಾಜ್ಯಾದ್ಯಂತ ತಮ್ಮ ಇಲಾಖೆಯ ಕಾರ್ಯ ಹೊರತುಪಡಿಸಿ ಅನ್ಯ ವಿಷಯಗಳಿಂದ ಕುಖ್ಯಾತಿಗೊಳಗಾಗಿದ್ದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಶ್ರೀಮತಿ ಕೃಷ್ಣವೇಣಿಯವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.

ಶಿಸ್ತು ಪ್ರಾದಿಕಾರದ ನಿರ್ದೇಶಕ ಪ್ರಸನ್ನಕುಮಾರ ಅಮಾನತ್ತು ಅದೇಶ ಹೊರಡಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಏರುಧ್ವನಿಯಲ್ಲಿ ಮಾತನಾಡಿದ್ದು, ವರ್ಗಾವಣೆ ಆದೇಶ ಪಡೆಯಲು ನಿರಾಕರಿಸಿದ್ದು, ವರ್ಗಾವಣೆಗೆ ಸಂಬಂಧಿಸಿದಂತೆ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದು, ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸದೇ ಇದ್ದದ್ದು, ಅನಧಿಕೃತ ಗೈೇರಾಗಿದ್ದು, ಅಕ್ರಮ ಗಣಿಗಾರಿಕೆ ತಡೆಯುವಲ್ಲಿ ವಿಫಲರಾಗಿರುವ ಹಿನ್ನೆಲೆಯಲ್ಲಿ ಅಮಾನತ್ತು ಮಾಡಲಾಗಿದೆ ಎಂದು ಅಮಾನತ್ತು ಆದೇಶದಲ್ಲಿ ತಿಳಿಸಲಾಗಿದೆ.

Please follow and like us:
error