ಗಂಗಾವತಿ ಮಹಿಳೆಯ ಕಗ್ಗೊಲೆ

ಗಂಗಾವತಿ : ಮನೆಯಲ್ಲಿದ್ದ ಏಕಾಂಗಿ ಮಹಿಳೆ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಗಂಗಾವತಿ ತಾಲೂಕಿನ ಆನೆಗುಂದಿಯಲ್ಲಿ ಈ ಕೃತ್ಯ ನಡೆದಿದೆ. 30 ವರ್ಷದ ಲಕ್ಷ್ಮೀ ಕಿಶೋರ ಎಂಬ ಮಹಿಳೆ ಮನೆಯಲ್ಲಿ ಇದ್ದಾಗ ಅಪರಿಚಿತ ದುಷ್ಕರ್ಮಿಗಳು ಈ ಕೃತ್ಯ ನಡೆಸಿದ್ದಾರೆ. ತಲೆ, ಕಣ್ಣು ನ ಭಾಗದಲ್ಲಿ ಕಬ್ಬಿಣದ ರಾಡಿನಿಂದ ಬಲವಾಗಿ ಹೊಡೆದ ಗಂಭೀರ ಗಾಯವಾಗಿ ರಕ್ತಸ್ರಾವ ವಾಗಿದೆ.
ಪಕ್ಕದ ಮನೆಯವ್ರು ಬರ್ಥಡೇ ಪಾಯಸ ಕೊಡಲು ಲಕ್ಷ್ಮೀ ಮನೆಗೆ ತೆರಳಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಅಕ್ಕಪಕ್ಕದವರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅಲ್ಪಸ್ವಲ್ಪ ಜೀವ ಹಿಡಿದುಕೊಂಡಿದ್ದ ಲಕ್ಷ್ಮೀಯನ್ನು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೃತಕ ಉಸಿರಾಟ ನೀಡಿ ಚಿಕಿತ್ಸೆ ನೀಡಿದ್ರು ಸ್ಪಂದಿಸದೆ ಸಾವನ್ನಪ್ಪಿದ್ದಾಳೆ. ಗಂಡ ಕಿಶೋರ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು ಎಂದಿನಂತೆ ಕೆಲಸಕ್ಕೆ ಹೋಗಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಈ ಘಟನೆ ನಡೆದಿದೆ. ಇನ್ನು ಮೃತ ಲಕ್ಷ್ಮೀ ಕೊರಳಲ್ಲಿದ್ದ ಮಾಂಗಲ್ಯ ಸರವನ್ನು ಸಹ ದುಷ್ಕರ್ಮಿಗಳು ಕಿತ್ತುಕೊಂಡು ಹೋಗಿದ್ದಾರೆ.
ಸ್ಥಳಕ್ಕೆ ಸಿಪಿಐ ದೀಪಕ್ ಬೂಸರೆಡ್ಡಿ, ಗ್ರಾಮೀಣ ಪಿಎಸ್ ಐ ವಿನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.