ಗಂಗಾವತಿ ಭಾಗದ ಜನರ ಆಸೆ ಈಡೇರಿಸಿದ ಸಂಸದ ಕರಡಿ ಸಂಗಣ್ಣ

ಗಂಗಾವತಿ : ರೈಲು ಪ್ರಗತಿಯ ಸಂಕೇತವಾಗಿದ್ದು ಒಂದು ವರ್ಷದೊಳಗೆ ಸಿಂಧನೂರು ಮತ್ತು ಬೆಂಗಳೂರಿಗೆ ರೈಲು ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುವದು ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು . ಸೋಮವಾರ ನಗರದ ರೈಲ್ವೆ ನಿಲ್ದಾಣ ಗಂಗಾವತಿ – ಹುಬ್ಬಳ್ಳಿ ಎಕ್ಸಪ್ರೆಸ್ ರೈಲಿಗೆ ಚಾಲನೆ ನೀಡಿ ಮಾತನಾಡಿದ ಅವರು , 23 ವರ್ಷಗಳ ಹಿಂದೆ ರೈಲ್ವೆ ಮಾರ್ಗದ ನಿರ್ಮಾಣ ಕಾಮಗಾರಿ

ಆರಂಭವಾಗಿತ್ತು . ನರೇಂದ್ರ ಮೋದಿ ಪ್ರಧಾನಿಯಾಗಿ ಕಾಮಗಾರಿ ತ್ವರಿತವಾಗಿ ನಡೆಸಿ ಗಿಣಿಗೇರಾದಿಂದ ಗಂಗಾವತಿ . ಮೀ . ಕಾಮಗಾರಿ ಪೂರ್ಣಗೊಳಿಸಿ ರೈಲು ಸಂಚಾರ ಆರಂಭವಾಗಿದೆ ಮುಂದಿನ ಒಂದು ವರ್ಷದಲ್ಲಿ ಸಿಂಧನೂರು ಹಾಗೂ ಬೆಂಗಳೂರಿಗೆ ರೈಲು ಸಂಚಾರ ಆರಂಭಿಸಲು ಹಾಗೂ ಕೇಂದ್ರ ಸರಕಾರ ಜತೆ ಸಂಪರ್ಕ ಸಾಧಿಸಲಾಗುತ್ತದೆ . ಗಂಗಾವತಿ ನಿಲ್ದಾಣಕ್ಕೆಪೂರ್ಣಪ್ರಮಾಣದಲ್ಲಿ ಸಿಬ್ಬಂದಿ ಹಾಗೂ ರೈಲ್ವೆ ಪೊಲೀಸ್ ನಿಯೋಜಿಸಲು ಈಗಾಗಲೇ ರೈಲ್ವೆ ಇಲಾಖೆ ಹಿರಿಯ ಆಧಿ ಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ರೈಲ್ವೆಮಾರ್ಗ ಪರಿವರ್ತನೆ ಕಾಮಗಾರಿ ಮುಕ್ತಾಯವಾಗಿದ್ದು ಸೊಲ್ಲಾಪುರ ಗದಗ ರೈಲನ್ನು ಹೊಸಪೇಟೆವರೆಗೆ ಓಡಿಸಲು ಬರೆಯಲಾಗಿದೆ . ಅದರಂತೆ ಹೊಸಪೇಟೆ – ಬೆಂಗಳೂರು ರೈಲ್ವೆಯನ್ನು ಗಂಗಾವತಿಯಿಂದ ಬೆಂಗಳೂರುವರೆಗೆ ಓಡಿಸಲು ರೈಲ್ವೆ ಸಚಿವರನ್ನು ಕೋರಲಾಗುತ್ತದೆ ಭಾರತ ಮಾಲಾ ಯೋಜನೆಯಡಿ ಕಡಬಾಗಿಲು ಸೇತುವೆ ಮೂಲಕ ರಾಯಚೂರು ರಸ್ತೆಸೇರ್ಪಡೆ ಮಾಡುವ ಕಾಮಗಾರಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.

Please follow and like us: