ಗಂಗಾವತಿ ಪೋಲಿಸ್ ಅಧಿಕಾರಿಗಳಿಂದ ಆಹಾರ ಸಾಮಾಗ್ರಿ ವಿತರಣೆ

ಗಂಗಾವತಿ : ಲಾಕ್ ಡೌನ್ ನಿಂದ ತೀವ್ರ ಸಂಕಷ್ಟದಲ್ಲಿರುವ ಬಡವರಿಗೆ, ಕೂಲಿ ಕಾರ್ಮಿಕರಿಗೆ  ಜಿಲ್ಲೆಯ ಪೋಲಿಸರು ಸತತವಾಗಿ ನೆರವಾಗುತ್ತಿದ್ದಾರೆ. ಗಂಗಾವತಿಯ ಡಿಎಸ್ಪಿ, ಸಿಪಿಐ , ಪಿಎಸೈ  ಸೇರಿದಂತೆ ಇತರ ಅಧಿಕಾರಿಗಳೂ ಸಹ ಅವರ ನೆರವಿಗೆ ಧಾವಿಸಿದ್ದಾರೆ. ಗಂಗಾವತಿ ತಾಲೂಕಿನ ಆನೆಗೊಂದಿಯ ಬಡವರಿಗೆ ಗ್ರಾಮೀಣ ಠಾಣೆಯ ಪಿಎಸ್ಐ  J ದೊಡ್ಡಪ್ಪ ನೇತೃತ್ವದಲ್ಲಿ 100 ಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಡಿವೈಎಸ್ಪಿ  ಚಂದ್ರಶೇಖರ್, ಸಿಪಿಐ ಸುರೇಶ ತಳವಾರ, ಅಂಜನಾದೇವಿ ಸೇರಿದಂತೆ ಇತರರು ಉಪಸ್ತಿತರಿದ್ರು.

Please follow and like us:
error