ಗಂಗಾವತಿ ತಾಲೂಕು ಗೃಹ ರಕ್ಷಕದಳ ನೂತನ ಕಛೇರಿ ಉದ್ಘಾಟನೆ

ಗಂಗಾವತಿ  : ಕೊಪ್ಪಳ ಜಿಲ್ಲಾ ಗೃಹರಕ್ಷಕದಳ ಗಂಗಾವತಿ ತಾಲೂಕು ಗೃಹ ರಕ್ಷಕದಳ ನೂತನವಾಗಿ ಕಛೇರಿಯನ್ನು ಉದ್ಘಾಟನೆ ಮಾಡಲಾಯಿತು. 
ಈ ಸಂದರ್ಭ ದಲ್ಲಿ ಮಾತನಾಡಿದ  ಪೊಲೀಸ್ ಉಪಾಧೀಕ್ಷಕರಾದ ಚಂದ್ರಶೇಖರ ನಮ್ಮ ರಾಜ್ಯದಲ್ಲಿ ಸುಮಾರು 30 ಸಾವಿರ ಗೃಹರಕ್ಷಕ ದಳ ಇದ್ದಾರೆ ಅದರಲ್ಲಿ ಸುಮಾರು 25 ಸಾವಿರ ಕಾರ್ಯನಿರ್ವಾಸುತ್ತಿದ್ದಾರೆ ಆದಕಾರಣ ಗೃಹರಕ್ಷಕರಿಗೆ ಭದ್ರತೆ ಕೊರತೆ ಕಾಣುತ್ತದೆ ಮತ್ತು ಆರೋಗ್ಯ ಮತ್ತು ಕುಟುಂಬ ನಡೆಸುವುದಕ್ಕೆ ಬಹಳ ತೊಂದರೆ ಇದೆ ಆದಕಾರಣ  ಸರಕಾರದಿಂದ ಮೂಲಭೂತ ಸೌಕರ್ಯಗಳ ಒದಗಿಸಿಕೊಡಬೇಕು ಮತ್ತು ನಮ್ಮ ರಾಜ್ಯದಲ್ಲಿ ಇಲ್ಲಿಯವರೆಗೂ ಯಾವುದೇ ಜಿಲ್ಲೆಯಲ್ಲಿ   ಮತ್ತು ತಾಲೂಕಿನಲ್ಲಿ ಗೃಹರಕ್ಷಕ ದಳ ಕಾರ್ಯಾಲಯ ಇಲ್ಲಾ ಅದರಲ್ಲಿ ನಮ್ಮ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕು ಕಛೇರಿ ಇರುವುದರಿಂದ ನಮಗೆ ಬಹಳಷ್ಟು ಸಂತೋಷವಾಗಿದೆ  ಗೃಹರಕ್ಷಕದಳದವರಿಗೆ ನಮ್ಮ ಪೊಲೀಸರಿಗೆ ಗೃಹರಕ್ಷಕದಳ ಅವಶ್ಯಕತೆ ಇದೆ ಏಕೆಂದರೆ ಯಾವುದೇ ಸಭೆ ಸಮಾರಂಭದಲ್ಲಿ  ಅನೈತಿಕ ಘಟನೆಗಳು ಇದ್ದರೆ ನಮ್ಮ ಪೊಲೀಸ್ ಜೊತೆಗೆ ಗೃಹರಕ್ಷಕದಳದವರು ಮುಖ್ಯ ಕೆಲಸವನ್ನು ಮಾಡುತ್ತಾರೆ ಆದರಿಂದ ಗೃಹರಕ್ಷಕದಳ ಕಛೇರಿಯಲ್ಲಿ ಮಹಿಳೆಯರಿಗೆ ವಸತಿ ಸಹಿತ ಮೂಲಭೂತ ಸೌಕರ್ಯಗಳ ಶಾಸಕರಿಗೆ ಮನವಿಯನ್ನು ಮಾಡಿಕೊಂಡು ಮಾತನಾಡಿದರು
ನಂತರ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರಾದ ಪರಣ್ಣ ಮುನವಳ್ಳಿ 

ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮ ಇದ್ದರೆ ಪೊಲೀಸರೊಂದಿಗೆ ಗೃಹರಕ್ಷಕದಳ ಮುಖ್ಯ ಆದಕಾರಣ ಗೃಹರಕ್ಷಕದಳ ಅವರಿಗೆ ಇನ್ನೂ ಮೂಲಭೂತ ಸೌಕರ್ಯಗಳಿಗಾಗಿ ನಮ್ಮ ಮುಖ್ಯಮಂತ್ರಿಗಳೊಂದಿಗೆ ಸಂಬಂಧಿಸಿದ ಅಧಿಕಾರಿಗಳುಂದಿಗೆ ಚರ್ಚೆ ಮಾಡಿ ಅಧಿವೇಶನದಲ್ಲಿ ಪ್ರಸ್ತಾವನೆಯನ್ನು ಮಾಡುತ್ತೇನೆ ಎಂದು ಭರವಸೆಯನ್ನು ನೀಡಿ ನಂತರ ಕಲಾಣ್ಯ ಕರ್ನಾಟಕದಿಂದ ಶಾಸಕರ ಅನುದಾನದಲ್ಲಿ ಸುಮಾರು 5 ರೂಪಾಯಿ ವೆಚ್ಚದಲ್ಲಿ ಕಛೇರಿಯ ಇನೊಷ್ಟೂ ಮೇಲಿನ ಕೊಠಡಿಗೆ ಅನುದಾನ ನೀಡುತ್ತೇನೆ ಮತ್ತು ಸರ್ಕಾರದಿಂದ ಬರುವ ಸೌಲಭ್ಯಗಳನ್ನು  ಒದಗಿಸಿ ಕೊಡುತ್ತೇನೆ ಎಂದು ಭರವಸೆಯನ್ನು ನೀಡಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಗೃಹರಕ್ಷಕದಳ ಕಮಾಂಡರ್ ಹನಮಂತರಾವ್ ಕೆಂಪಹಳ್ಳಿ ನಗರಸಭೆ ಸದಸ್ಯರಾದ ವಾಸುದೇವ ನವಲಿ  ವಿಜಯಕುಮಾರ ಗೃಹರಕ್ಷಕದಳ ತಾಲೂಕು ಕಮಾಂಡರ್ ಎಸ್.ಮೀರಾಸಾಬ  ಗೋಪಾಲ ಶಾಸ್ತ್ರಿ ಸೇರಿದಂತೆ ಇತ್ತರರು ಇದ್ದರು

Please follow and like us:
error