ಗಂಗಾವತಿ ಕಲ್ಯಾಣ ನಗರದಲ್ಲಿ ರಂಗೇರಿದ ಸಂಗೀತ ರಸಸಂಜೆ

Gangavati   ಶ್ರೀ ಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಗಂಗಾವತಿಯ ಕಲ್ಯಾಣ ನಗರದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ.ಬಸಣ್ಣರವರು ಕಲ್ಯಾಣನಗರದಲ್ಲಿ ಕಲ್ಯಾಣವಾದಷ್ಟೇ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ಆಯೋಜಿದ ಸಂಸ್ಥೆಯ ಕಾರ್ಯ ಶ್ಲಾಘನೀಯವಾದದ್ದು, ಇಂತಹ ಕಾರ್ಯಕ್ರಮಗಳು ನಾಡಿನಾದ್ಯಂತ ನೆರವೇರಬೇಕು. ಸಂಸ್ಕೃತಿಯ ಅರಿವು ಹೆಚ್ಚಾಗಬೇಕು, ಇಂತಹ ಕಾರ್ಯಗಳು ಸಂಸ್ಥೆಗಳಿಂದಷ್ಟೇ ಸಾಧ್ಯ. ಇದಕ್ಕೆ ಸಂಸ್ಕೃತಿ ಇಲಾಖೆಯ ನೆರವು ಪುಷ್ಠಿ ನೀಡಿದಂತಾಗಿದೆ ಎಂದರು.
ಕಾರ್ಯಕ್ರಮದ ಪ್ರಥಮದಲ್ಲಿ ಪಂಚಾಕ್ಷರಕುಮಾರ ಬೊಮ್ಮಲಾಪುರರ ಗಾಯನ ಹಾಗೂ ನಾಗರಾಜ ಶ್ಯಾವಿಯವರ ಕೊಳಲುವಾದನದಲ್ಲಿ ಯಮನ ರಾಗದ ಜುಗಲ್‌ಬಂದಿ ಸೇರಿದ ಶೋತೃಗಳ ಮನಸೂರೆಗೊಂಡಿತು. ಸಂಜಯ ಹಂದ್ರಾಳರ ಹಿಂದುಸ್ತಾನಿ ಗಾಯನ, ಮಾರುತಿ ದೊಡ್ಡಮನಿಯವರ ವಚನ ಸಂಗೀತ, ಶಿವಪ್ಪ ಹುಳ್ಳಿಯವರ ತತ್ವಪದಗಳು, ವಿನೋದ ಈಡಿಗರವರ ಸುಗಮ ಸಂಗೀತ, ನರಸಿಂಹ ದರೋಜಿಯವರ ದಾಸವಾಣಿ, ವಿಜಯಲಕ್ಷ್ಮೀ ನಾಗರಾಜರ ಭಾವಗೀತೆಗಳು, ಮೈಲಾರಪ್ಪ ಬೂದಿಹಾಳರವರ ಜಾನಪದ ಸಂಗೀತ ಕಾರ್ಯಕ್ರಮಗಳು ಸಂಗೀತದ ರಸದೌತಣವನ್ನೆ ಉಣಬಡಿಸಿದವು. ಹಾಗೂ ಎ-೧ ನೃತ್ಯ ಸಂಸ್ಥೆಯಿಂದ ಸಮೂಹ ನೃತ್ಯಗಳು ಜರುಗಿದವು.
ವಾದ್ಯವೃಂದದ ಕೀಬೋರ್ಡನಲ್ಲಿ ವಿಜಯಕುಮಾರವರ ಅದ್ಬುತ ಸುನಾದ ತಬಲಾದಲ್ಲಿ ರಾಘವೇಂದ್ರ ಗಂಗಾವತಿಯ ಕೈ ಚಳಕ ಹಾಗೂ ತಾಳ ವಾದ್ಯದಲ್ಲಿ ಕೃಷ್ಣ ಸೊರಟೂರ ಹಾಗೂ ಶಿವು ಗೆಜ್ಜಿಯವರ ಸಾಥಿ ಗಾಯನ ಹಾಗೂ ವಾದನಕ್ಕೆ ವಿಶೇಷ ಮೆರುಗನ್ನು ನೀಡಿದವು.
ಸಂಸ್ಥೆಯು ಪ್ರತಿ ಕಾರ್ಯಕ್ರಮದಲ್ಲಿ ನಾಡಿಗೆ, ಸಂಸ್ಕೃತಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಿರುವ ಮಹಾನ ಸಾಧಕರನ್ನು ಗುರುತಿಸಿ ಅವರ ಸಾಧನೆಗೆ ಮತ್ತಷ್ಟು ಪುಷ್ಟಿಯನ್ನು ತುಂಬಲು ಸಂಸ್ಥೆಯ ವತಿಯಿಂದ ವಿಶೇಷ ಸನ್ಮಾನ ಗೌರವವನ್ನು ಸಮರ್ಪಿಸಲಾಗುತ್ತದೆ. ಆ ನಿಟ್ಟಿನಲ್ಲಿ ಶಿವಕುಮಾರ ಮಾಲೀಪಾಟೀಲ್, ಶರಣೇಗೌಡ ಪೋಲಿಸ್‌ಪಾಟೀಲ್, ಪತ್ರಕರ್ತರಾದ ನಿಂಗಜ್ಜ, ಶಿಕ್ಷಕರಾದ ಉಮೇಶ ಹಾಗೂ ಮಿನಾಕ್ಷಿ ಫಣಿರಾಜರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಗೀತ ಶಿಕ್ಷಕರಾದ ಮಾರುತಿ ದೊಡ್ಡಮನಿಯವರ ವಾಕ್ಚಾತುರ್ಯ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ವಿಶೇಷ ಮಾತುಗಾರಿಕೆಯ ಮೂಲಕ ನಿರೂಪಿಸುವಲ್ಲಿ ಕಾರ್ಯಕ್ರಮದ ವಿಶೇಷತೆಯನ್ನು ಹೆಚ್ಚಿಸಿತು.

Please follow and like us:
error

Related posts