ಗಂಗಾವತಿ ಕನ್ನಡ ಸಾಹಿತ್ಯ ಸಮ್ಮೇಳನ ವಿಶ್ವೇಶ್ವರ ಭಟ್ ಗೆ ವಿರೋಧ

ಗಂಗಾವತಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವಿಶ್ವೇಶ್ವರ ಭಟ್ ಆಗಮನಕ್ಕೆ ವಿರೋಧ ವ್ಯಕ್ತವಾಗಿದೆ.

ಪ್ರತಿಭಟನಾಕಾರರು ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ದತೆ ಮಾಡಿಕೊಂಡಿದ್ದರು.

ಪ್ರಗತಿಪರ ಸಂಘಟನೆ ಹಾಗೂ ವಿದ್ಯಾರ್ಥಿ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆಗೆ ಸಿದ್ದತೆ ಮಾಡಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಪೋಲಿಸರು ಹಾಗೂ ಸಂಘಟಕರ ಮದ್ಯೆ ತೀವ್ರ ವಾಗ್ವಾದ ನಡೆಯಿತು.ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಪೋಲಿಸರರು ಪ್ರತಿಭಟನೆ ಮಾಡದಂತೆ ಮನವಿ ಮಾಡಿಕೊಂಡರು.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದಾಗ ಫೇಸ್ ಬುಕ್ ಲ್ಲಿ ವಿಶ್ವೇಶ್ವರ ಭಟ್ ಸಂಭ್ರಮಿಸಿದ ಆರೋಪದ ಹಿನ್ನೆಲೆ ಅಲ್ಲದೇ ಪತ್ರಿಕೆಯಲ್ಲಿ ಗೌರಿಬಗ್ಗೆ ಕೀಳು ಮಟ್ಟದಲ್ಲಿ ಬರೆದಿದ್ದ ವಿಶ್ವೇಶ್ವರ ಭಟ್

ಒಬ್ಬ ದಿಟ್ಟ ಮಹಿಳಾ ಹೋರಾಟಗಾರ್ತಿ ಪತ್ರಕರ್ತೆ ವಿರುದ್ಧ ಬರೆದ ಭಟ್ ನಮಗೆ ಅಗತ್ಯವಿಲ್ಲಉದ್ಘಾಟನೆ ಮಾಡಲು ಅವಕಾಶ ನೀಡುವುದಿಲ್ಲ ಎಂದು ವಿರೋಧವ್ಯಕ್ತ ಪಡಿಸುತ್ತಿರುವ ಪ್ರಗತಿಪರ ಸಂಘಟನೆಗಳು

ಪ್ರತಿಭಟನೆಗೆ ಅವಕಾಶ ನಿರಾಕರಿಸಿದ ಪೋಲಿಸರು. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೇ ತೀರ್ಮಾನ ಮಾಡಿದ್ದಾರೆ ಅನ್ನೋ ಆರೋಪ

ಪೋಲಿಸರ ಎಚ್ಚರಿಕೆಯ ನಡುವೆಯೂ ಕಪ್ಪು ಬಾವುಟ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದರಿಂದ ಹೋರಾಟಗಾರ ಜೆ.ಭಾರದ್ವಾಜ , ಸಂತೋಷ ಸೇರಿದಂತೆ ಇತರರನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.

Related posts