ಗಂಗಾವತಿಯಲ್ಲಿ ಅಖಿಲ ಭಾರತ ಎಸ್ಎಫ್ ಐ ಜಾಥಾ

Gangavati News ತಾರತಮ್ಯ ರಹಿತ, ಸಮಾನ ಗುಣಮಟ್ಟದ ಮತ್ತು ವೈಜ್ಞಾನಿಕ ಶಿಕ್ಷಣಕ್ಕಾಗಿ ಒತ್ತಾಯಿಸಿ #SFI ಅಖಿಲ ಭಾರತ ಜಾಥಾವನ್ನು ಗಂಗಾವತಿಯಲ್ಲಿ ಸಹಸ್ರಾರು ವಿದ್ಯಾರ್ಥಿಗಳು ಸ್ವಾಗತಿಸಿದರು.

ನಿಲ್ದಾಣದ ಮುಂಭಾಗವಿರುವ ಜಗಜೀವನ್ ರಾಮ್ ವೃತ್ತದ ಬಳಿ ಸಮಾವೇಶ ನಡೆಯಿತು. ಬಹಿರಂಗ ಸಭೆ ಉದ್ದೇಶಿಸಿ SFI ಅಖಿಲ ಭಾರತ ಅಧ್ಯಕ್ಷರಾದ ವಿ.ಪಿ.ಸಾನು. ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ,ರಾಜ್ಯಾಧ್ಯಕ್ಷ ವಿ.ಅಂಬರೀಶ್, ಕೇಂದ್ರ ಸಮಿತಿ ಸದಸ್ಯರಾದ ಬಸವರಾಜ್ ಪೂಜಾರ್ ಮಾತನಾಡಿದರು.

SFI ಕೇಂದ್ರ ಸಮಿತಿ ಸದಸ್ಯರಾದ ರೇಣುಕಾ ಕಹಾರ, #SFI ಜಿಲ್ಲಾ ಅಧ್ಯಕ್ಷ ಅಮರೇಶ್ ಕಡಗದ್, ರಾಜ್ಯ ಉಪಾಧ್ಯಕ್ಷ ಶಬ್ಬೀರ್, ರಾಜ್ಯ ಪದಾಧಿಕಾರಿಗಳಾದ ಗ್ಯಾನೇಶ್ ಕಡಗದ್, ದೊಡ್ಡಬಸವರಾಜ, ಶಿವಾನಂದ ಬೋಸ್ಲೆ, ಶಿವಕುಮಾರ್ ಮ್ಯಾಗಳಮನಿ, ಮುಖಂಡರಾದ ಬಾಳಪ್ಪ, ಮರಿನಾಗ,ಸೇರಿದಂತೆ ಅನೇಕರಿದ್ದರು.

Please follow and like us:
error