ಗಂಗಾಮತಸ್ಥರ ಸಂಘದ ಚುನಾವಣೆಯ ಪೂರ್ವಭಾವಿ ಸಭೆ

ಕೊಪ್ಪಳ : ಕೊಪ್ಪಳ : ಕರ್ನಾಟಕ ರಾಜ್ಯ ಗಂಗಾಮತಸ್ಥರ ಸಂಘ, ರಿ ಬೆಂಗಳೂರು, ರಾಜ್ಯ ಸಂಘದ ಅಧ್ಯಕ್ಷರ, ಪದಾಧಿಕಾರಿಗಳ, ಜಿಲ್ಲಾ ನಿರ್ದೆಶಕರ ಚುನಾವಣೆಯ ದಿನಾಂಕ ನವ್ಹಂಬರ ೧೧ ರಂದು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಸಹಕಾರ ನಿಭಂದಕರ ಆದೇಶದಂತೆ ಘೋಷಣೆಯಾಗಿದೆ.
ಚುನಾವಣೆಯ ಅಂಗವಾಗಿ ಭಾಗ್ಯನಗರದ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಮುಂಜಾನೆ ೧೧ ಗಂಟೆಗೆ ಸಭೆಯನ್ನು ಕರೆಯಲಾಗಿದೆ.
ಇದೇ ಅಕ್ಟೋಬರ ೨೪ ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗುತ್ತಿದ್ದು ಅದರ ಪ್ರಯುಕ್ತ ರಾಜ್ಯಾದ್ಯಂತ ರಾಜ್ಯ ಸಂಘದ ಎಲ್ಲಾ ಅಜೀವ ಸದಸ್ಯತ್ವವನ್ನು ಹೊಂದಿರುವ ಸದಸ್ಯರು ಬೆಂಗಳೂರಿಗೆ ಹೋಗಿ ಮತದಾನ ಪ್ರಕ್ರೀಯೆಯಲ್ಲಿ ಭಾಗವಹಿಸಿ ಮತದಾನ ಮಾಡಿ ರಾಜ್ಯ ಸಂಘದ ಸರ್ವಸದಸ್ಯರನ್ನು ಆಯ್ಕೆ ಮಾಡಬೇಕಾಗಿರುವುದರಿಂದ ಕೊಪ್ಪಳ ಜಿಲ್ಲೆಯ ಎಲ್ಲಾ ಅಜೀವ ಸದಸ್ಯತ್ವವನ್ನು ಹೊಂದಿರುವ ಬಂಧುಗಳು, ಜಿಲ್ಲಾ ಗಂಗಾಮತಸ್ಥರ ಸಂಘದ ಜಿಲ್ಲೆ, ತಾಲೂಕಗಳ ಸಂಘದ ಅಧ್ಯಕ್ಷರು, ಪಪಾಧಿಕಾರಿಗಳು, ಸಮಾಜದ ಹಿರಿಯರು, ಯುವಕರು ಆದ್ದರಿಂದ ಸಂಘದ ಸರ್ವಸದಸ್ಯರು, ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿ ತಮ್ಲ ಸಲಹೆಗಳನ್ನು ನೀಡಬೇಕೆಂದು ಗಂಗಾಮತಸ್ಥರ ಜಿಲ್ಲಾ ಸಂಘದ ಅಧ್ಯಕ್ಷ ಬಾಳಪ್ಪ ಬಾರಕೇರ  ತಿಳಿಸಿದ್ದಾರೆ.

Please follow and like us:
error