ಖುಷಿಯೇ ದೊಡ್ಡ ಖಜಾನೆ, ಖುಷಿಯೇ ಪೌಷ್ಟಿಕ ಆಹಾರ -ಬ್ರಹ್ಮಕುಮಾರಿ ಯೋಗಿನಿ ಅಕ್ಕ

ಕೊಪ್ಪಳ,ಅ.೨೮:ಖುಷಿಯೇ ದೊಡ್ಡ ಖಜಾನೆ, ಖುಷಿಯೇ ಪೌಷ್ಟಿಕ ಆಹಾರ ಎಂದು ಬ್ರಹ್ಮಕುಮಾರಿ ಯೋಗಿನಿ ಅಕ್ಕನವರು ಹೇಳಿದರು.
ಕೊಪ್ಪಳ ಮತ್ತು ಭಾಗ್ಯನಗರದ ಇನ್ನರ್ ವೀಲ್ ಕ್ಲಬ್‌ನ ಜಿಲ್ಲಾ ರ್‍ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ವರ್ತಮಾನ ಸಮಯದಲ್ಲಿ ಮನುಷ್ಯನಿಗೆ ಸುಖದ ಸಾಧನಗಳಿವೆ ಆದರೆ ಸುಖವಿಲ್ಲ ಐಷಾರಾಮದ ವಸ್ತುಗಳಿವೆ ಆದರೆ ಖುಷಿ ಇಲ್ಲ. ಮನೆಯಲ್ಲಿ ಟಿ.ವಿ ಮೊಬೈಲ್,ಸೋಪಾ ಎಲ್ಲಾ ಸೆಟ್‌ಗಳಿವೆ ಆದರೆ ಮೈಂಡ್ ಅಪ್‌ಸೆಟ್ ಇದರ ಪರಿಣಾಮ ಜೀವನ ಬೇಸರ ನೀರಸ, ನಿರಾಶಾವಾದಿಗಳಾಗಿ ಬದುಕುವ ಸ್ಥಿತಿಯನ್ನು ಕಾಣುತ್ತಿದ್ದೇವೆ ಎಂದರು.
ಮಹಿಳೆಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದಾರೆ ಆದರೆ ಮಾನಸಿಕವಾಗಿ, ಆಂತರಿಕವಾಗಿ ಸಶಕ್ತರಾಗಬೇಕಾಗಿದೆ. ಎಂತಹ ಪರಿಸ್ಥಿತಿಗಳು ಸಮಸ್ಯೆಗಳು ಎದುರಾದರೂ ಆಂತರಿಕ ಮನಸ್ಥಿತಿಯನ್ನು ಶಕ್ತಿಶಾಲಿ ಮಾಡಿಕೊಳ್ಳುವುದು ಬಹಳ ಅಗತ್ಯವಿದೆ ಅದಕ್ಕಾಗಿ ಅಧ್ಯಾತ್ಮ ಜ್ಞಾನ ಮತ್ತು ಮೆಡಿಟೇಷನ್ ಅತೀ ಅವಶ್ಯಕ ಎಂದರು.
ಮೇದಿಕೆಯ ಮೇಲೆ ಅಧ್ಯಕ್ಷರಾದ ಶ್ರೀಮತಿ ಶೀಲತ, ರ್‍ಯಾಲಿಯ ಅಧ್ಯಕ್ಷರಾದ ಶಾರದಾ ಪಾನಗಂಟಿ, ಇನ್ನರ್ ವಿತ್ ಕ್ಲಬ್ನ ಖಜಾಂಚಿ, ತ್ರೀಶಾಲ, ವನಜಾ,ಮಮತಾ, ಸುಜಾತ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದರು.

Please follow and like us:
error